ಆದಾಯ ತೆರಿಗೆ ನೀತಿಗೆ ತಿದ್ದುಪಡಿಯನ್ನು ತರುವುದರ ಮೂಲಕ ಸರ್ಕಾರ ಕಾಳಧನಿಕರಿಗೆ ಸಹಾಯ ಮಾಡುತ್ತಿದೆ. ಲೆಕ್ಕಕ್ಕೆ ಸಿಗದ ಅರ್ಧದಷ್ಟು ಹಣವನ್ನು ಅವರಿಗೆ ಹಿಂತಿರುಗಿಸುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ನವದೆಹಲಿ (ನ.30): ಆದಾಯ ತೆರಿಗೆ ನೀತಿಗೆ ತಿದ್ದುಪಡಿಯನ್ನು ತರುವುದರ ಮೂಲಕ ಸರ್ಕಾರ ಕಾಳಧನಿಕರಿಗೆ ಸಹಾಯ ಮಾಡುತ್ತಿದೆ. ಲೆಕ್ಕಕ್ಕೆ ಸಿಗದ ಅರ್ಧದಷ್ಟು ಹಣವನ್ನು ಅವರಿಗೆ ಹಿಂತಿರುಗಿಸುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಿನ್ನೆ ತೆರಿಗೆ ನೀತಿ ಮಸೂದೆಯನ್ನು ಲೋಕಸಭೆಯಲ್ಲಿ ಅನುಮೋದನೆ ಮಾಡಲಾಗಿದೆ. ಈ ಮಸೂದೆಯಲ್ಲಿ ನೋಟು ನಿಷೇಧದ ಬಳಿಕ ಕಪ್ಪುಹಣವನ್ನು ಕಾನೂನಾತ್ಮಕಗೊಳಿಸಿಕೊಳ್ಳಲು ದಾರಿ ಮಾಡಿಕೊಟ್ಟಂತಾಗಿದೆ. ಜೊತೆಗೆ ಮಸೂದೆ ಪ್ರಕಾರ ಬ್ಯಾಂಕಿನಲ್ಲಿ ಕಪ್ಪುಹಣವನ್ನು ಘೋಷಿಸಿದವರಿಗೆ ಶೇ.50 ರಷ್ಟು ತೆರಿಗೆ ಹಾಕಲಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ನಾಗ್ರೋಟಾ ದಾಳಿಯ ಬಗ್ಗೆ ಪ್ರಸ್ತಾಪಿಸುತ್ತಾ “ ಯಾರಾದರೂ ಮರಣ ಹೊಂದಿದರೆ ಅವರ ಗೌರವಾರ್ಥವಾಗಿ ಸಂಸತ್ ನಲ್ಲಿ ಸಂತಾಪ ಸೂಚಿಸುವುದು ವಾಡಿಕೆ. ಆದರೆ ಇದೇ ಮೊದಲ ಬಾರಿಗೆ ನಾಗ್ರೋಟಾ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಸಂತಾಪ ಸೂಚಿಸದೇ ಸಂಸದರು ಹೊರನಡೆದಿದ್ದಾರೆ" ಎಂದು ರಾಹುಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.