"ಐಇಡಿ ಸ್ಫೋಟಗಳಿಂದ 112 ಜನರು ಬಲಿಯಾಗಿದ್ದು 479 ಮಂದಿ ಗಾಯಗೊಂಡಿದ್ದಾರೆ. ಇಓಡಿ ಸ್ಫೋಟಗಳಿಂದ 6 ಜನರು ಸಾವನ್ನಪ್ಪಿದ್ದು, 26 ಮಂದಿಗೆ ಗಾಯವಾಗಿದೆ" ಎಂದು ಸಚಿವರು ತಿಳಿಸಿದ್ದಾರೆ.

ನವದೆಹಲಿ(ಏ. 11): ಭಾರತದಲ್ಲಿ ಕಳೆದ ವರ್ಷದಂದು 400ಕ್ಕೂ ಹೆಚ್ಚು ಸ್ಫೋಟ ಘಟನೆಗಳು ನಡೆದಿದ್ದು, 118ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟಿದ್ದಾರೆ ಎಂದು ಸರಕಾರದ ವರದಿಯೊಂದು ಹೇಳಿದೆ. 2016ರಲ್ಲಿ ದೇಶದಲ್ಲಿ ಒಟ್ಟು 406 ಸ್ಫೋಟ ಪ್ರಕರಣಗಳು ಸಂಭವಿಸಿವೆ. ಇದರಲ್ಲಿ 337 ಐಇಡಿ ಸ್ಫೋಟಗಳಾದರೆ, 69 ಇಓಡಿ ಸ್ಫೋಟಗಳಾಗಿವೆ. ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಗಂಗಾರಾಮ್ ಆಹಿರ್ ಲಿಖಿತ ಉತ್ತರದ ಮೂಲಕ ಮಾಹಿತಿ ನೀಡಿದರು. ಸಚಿವರು ಈ ಮಾಹಿತಿಯನ್ನು ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್'ನ ನ್ಯಾಷನಲ್ ಬಾಂಬ್ ಡೇಟಾ ಸೆಂಟರ್'ನಿಂದ ಪಡೆದಿದ್ದಾರೆ.

"ಐಇಡಿ ಸ್ಫೋಟಗಳಿಂದ 112 ಜನರು ಬಲಿಯಾಗಿದ್ದು 479 ಮಂದಿ ಗಾಯಗೊಂಡಿದ್ದಾರೆ. ಇಓಡಿ ಸ್ಫೋಟಗಳಿಂದ 6 ಜನರು ಸಾವನ್ನಪ್ಪಿದ್ದು, 26 ಮಂದಿಗೆ ಗಾಯವಾಗಿದೆ" ಎಂದು ಸಚಿವರು ತಿಳಿಸಿದ್ದಾರೆ.

ಮೇಲೆ ತಿಳಿಸಿದ ಸ್ಫೋಟ ಪ್ರಕರಣ ಅಂಕಿ-ಅಂಶದಲ್ಲಿ ಆಕಸ್ಮಿಕವಾಗಿ ಸಂಭವಿಸಿರುವ ಪ್ರಕರಣಗಳೂ ಒಳಗೊಂಡಿವೆ.