ನೋಟು ನಿಷೇಧ ಕ್ರಮದಡಿ ತಮ್ಮ ಬ್ಯಾಂಕ್‌ ಖಾತೆಗೆ ಕಪ್ಪು ಹಣವನ್ನು ಜಮೆ ಮಾಡುವವರಿಗಾಗಿ ಇದೀಗ ಹೊಸ ಘೋಷಣಾ ಯೋಜನೆಯೊಂದನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಪ್ರಕಾರ ಕಪ್ಪು ಹಣವನ್ನು ತಮ್ಮ ಖಾತೆಗೆ ಜಮೆ ಮಾಡುವವರಿಗೆ ಶೇ.50 ತೆರಿಗೆ ವಿಧಿಸಲಾಗುವುದು ಮತ್ತು ಅವರು ಜಮೆ ಮಾಡಿರುವ ಕಪ್ಪು ಹಣವನ್ನು ನಾಲ್ಕು ವರ್ಷಗಳ ಮಟ್ಟಿಗೆ ಉಪಯೋಗಿಸುವಂತಿಲ್ಲ . ಈ ಯೋಜನೆಯನ್ನು ಬಳಸಿಕೊಳ್ಳದವರು ಅನಂತರದಲ್ಲಿ ಹಿಡಿಯಲ್ಪಟ್ಟಲ್ಲಿ ಅವರಿಗೆ ಶೇ.60 ಮೀರಿದ ದಂಡವನ್ನು ಹೇರಲಾಗುವುದು. ಈ ಬಗ್ಗೆ ಸರಕಾರವು ಮುಂದಿನ ವಾರ ಆದಾಯ ತೆರಿಗೆ ಕಾಯಿದೆಗೆ ತಿದ್ದುಪಡಿಯನ್ನು ತರಲಿದೆ.
ನವದೆಹಲಿ(ನ.26): ನೋಟು ನಿಷೇಧ ಕ್ರಮದಡಿ ತಮ್ಮ ಬ್ಯಾಂಕ್ ಖಾತೆಗೆ ಕಪ್ಪು ಹಣವನ್ನು ಜಮೆ ಮಾಡುವವರಿಗಾಗಿ ಇದೀಗ ಹೊಸ ಘೋಷಣಾ ಯೋಜನೆಯೊಂದನ್ನು ಜಾರಿಗೆ ತರಲಾಗಿದೆ.
ಈ ಯೋಜನೆಯ ಪ್ರಕಾರ ಕಪ್ಪು ಹಣವನ್ನು ತಮ್ಮ ಖಾತೆಗೆ ಜಮೆ ಮಾಡುವವರಿಗೆ ಶೇ.50 ತೆರಿಗೆ ವಿಧಿಸಲಾಗುವುದು ಮತ್ತು ಅವರು ಜಮೆ ಮಾಡಿರುವ ಕಪ್ಪು ಹಣವನ್ನು ನಾಲ್ಕು ವರ್ಷಗಳ ಮಟ್ಟಿಗೆ ಉಪಯೋಗಿಸುವಂತಿಲ್ಲ . ಈ ಯೋಜನೆಯನ್ನು ಬಳಸಿಕೊಳ್ಳದವರು ಅನಂತರದಲ್ಲಿ ಹಿಡಿಯಲ್ಪಟ್ಟಲ್ಲಿ ಅವರಿಗೆ ಶೇ.60 ಮೀರಿದ ದಂಡವನ್ನು ಹೇರಲಾಗುವುದು. ಈ ಬಗ್ಗೆ ಸರಕಾರವು ಮುಂದಿನ ವಾರ ಆದಾಯ ತೆರಿಗೆ ಕಾಯಿದೆಗೆ ತಿದ್ದುಪಡಿಯನ್ನು ತರಲಿದೆ.
ನವೆಂಬರ್ 8ರ ಬಳಿಕದಲ್ಲಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾದ 500 ರೂ. ಮತ್ತು 1,000 ರೂ. ನೋಟುಗಳ ಮೊತ್ತದ ಮೇಲಿನ ತೆರಿಗೆ ಹೊರೆಯ ಬಗ್ಗೆ ಸ್ಪಷ್ಟೀಕರಣ ನೀಡಲಾದ 1 ದಿನದ ನಂತರ ಕೇಂದ್ರ ಸಚಿವ ಸಂಪುಟ ಈ ಯೋಜನೆಗೆ ಅನುಮೋದನೆ ನೀಡಿದೆ.
