ನಾಳೆಯಿಂದ ಸರ್ಕಾರವು ಸರಳೀಕೃತ ನೂತನ ತೆರಿಗೆ ರಿಟರ್ನ್ಸ್ ಅರ್ಜಿಯನ್ನು ಜಾರಿಗೆ ತರುವುದಾಗಿ ಸೂಚಿಸಿದೆ. ಕೆಲವು ಕಾಲಂಗಳನ್ನು ತೆಗೆದು ಹಾಕಿದ್ದು ಅರ್ಜಿ ತುಂಬುವುದನ್ನು ಸರಳೀಕೃತಗೊಳಿಸಲಾಗಿದೆ. ಐಟಿಆರ್1 ಜೊತೆ ಈ ಅರ್ಜಿಯನ್ನು ಸೇರಿಸಲಾಗಿದ್ದು ಸಹಜ್ ಎಂದು ಹೆಸರಿಡಲಾಗಿದೆ.

ನವದೆಹಲಿ (ಮಾ.31): ನಾಳೆಯಿಂದ ಸರ್ಕಾರವು ಸರಳೀಕೃತ ನೂತನ ತೆರಿಗೆ ರಿಟರ್ನ್ಸ್ ಅರ್ಜಿಯನ್ನು ಜಾರಿಗೆ ತರುವುದಾಗಿ ಸೂಚಿಸಿದೆ. ಕೆಲವು ಕಾಲಂಗಳನ್ನು ತೆಗೆದು ಹಾಕಿದ್ದು ಅರ್ಜಿ ತುಂಬುವುದನ್ನು ಸರಳೀಕೃತಗೊಳಿಸಲಾಗಿದೆ. ಐಟಿಆರ್1 ಜೊತೆ ಈ ಅರ್ಜಿಯನ್ನು ಸೇರಿಸಲಾಗಿದ್ದು ಸಹಜ್ ಎಂದು ಹೆಸರಿಡಲಾಗಿದೆ.

ಚಾಪ್ಟರ್ ವಿಐಎ ಅಡಿಯಲ್ಲಿ ಬರುವ ಕಡಿತಗಳನ್ನು ತೆಗೆದುಹಾಕಲಾಗಿದೆ. ಹೆಚ್ಚಾಗಿ ಬಳಸುವ ಕಾಲಂಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಸೆಕ್ಷನ್ 80 ಸಿ ಅಡಿಯಲ್ಲಿ ಬರುವ ಕಡಿತ, ಮೆಡಿಕ್ಲೇಮ್ (80ಡಿ) ಹಾಗೆ ಉಳಿಯಲಿದೆ. ಬೇರೆ ಬೇರೆ ವಿಭಾಗಗಳಲ್ಲಿ ವೈಯಕ್ತಿವಾಗಿ ತೋರಿಸಬೇಕಾಗಿರುವ ಕಡಿತಗಳ ಮಾಹಿತಿಯನ್ನು ತುಂಬುವುದು ಬಿಡುವುದು ಅವರ ಆಯ್ಕೆಗೆ ಬಿಡಲಾಗಿದೆ.