ಅಂತಾರಾಷ್ಟ್ರೀಯ ವಿಮಾನ ನಿಲ್ದಾ ಣಕ್ಕೆ ಮೆಟ್ರೋ ಸಂಪರ್ಕಕ್ಕಾಗಿ ಇದೀಗ ಒಟ್ಟು 9 ಮಾರ್ಗಗಳ ಪ್ರಸ್ತಾವನೆ ಸರ್ಕಾರದ ಮುಂದಿದೆ. ಕೆ.ಆರ್‌.ಪುರಂ ವರೆಗೆ ಸಾಗುವ ಎರಡನೇ ಹಂತದ ಮೆಟ್ರೋ ರೈಲು ವಿಸ್ತರಣೆಯ ಭಾಗ ವಾಗಿ ಈ ಬಹುತೇಕ ಮಾರ್ಗಗಳನ್ನು ಪ್ರಸ್ತಾಪಿಸಲಾಗಿದ್ದು, ಯಾವ ಮಾರ್ಗದ ಮೂಲಕ ಮೆಟ್ರೋ ರೈಲು ಸೇವೆ ಸಂಪರ್ಕ ಕಲ್ಪಿಸಬೇಕೆಂಬ ನಿರ್ಧಾರ ಕೈಗೊಳ್ಳಬೇಕಿದೆ.
ಮಂಗಳವಾರ ನಡೆದ ಬಿಎಂಆರ್ಡಿಎ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು ವಿಮಾನ ನಿಲ್ದಾಣಕ್ಕೆ ಪರ್ಯಾ ಯ ರಸ್ತೆ ಮಾರ್ಗಗಳ ಕಾಮ ಗಾರಿ ಪ್ರಗತಿಯ ಅವಲೋಕನ ನಡೆಸಿದರು.
ಅಂತಾರಾಷ್ಟ್ರೀಯ ವಿಮಾನ ನಿಲ್ದಾ ಣಕ್ಕೆ ಮೆಟ್ರೋ ಸಂಪರ್ಕಕ್ಕಾಗಿ ಇದೀಗ ಒಟ್ಟು 9 ಮಾರ್ಗಗಳ ಪ್ರಸ್ತಾವನೆ ಸರ್ಕಾರದ ಮುಂದಿದೆ. ಕೆ.ಆರ್.ಪುರಂ ವರೆಗೆ ಸಾಗುವ ಎರಡನೇ ಹಂತದ ಮೆಟ್ರೋ ರೈಲು ವಿಸ್ತರಣೆಯ ಭಾಗ ವಾಗಿ ಈ ಬಹುತೇಕ ಮಾರ್ಗಗಳನ್ನು ಪ್ರಸ್ತಾಪಿಸಲಾಗಿದ್ದು, ಯಾವ ಮಾರ್ಗದ ಮೂಲಕ ಮೆಟ್ರೋ ರೈಲು ಸೇವೆ ಸಂಪರ್ಕ ಕಲ್ಪಿಸಬೇಕೆಂಬ ನಿರ್ಧಾರ ಕೈಗೊಳ್ಳಬೇಕಿದೆ. ಇವುಗಳಲ್ಲಿ ಪ್ರಮುಖವಾಗಿ ನಾಗವಾರ ಮೂಲಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗುವ ಮಾರ್ಗದ ಕುರಿತು ಒಲವು ವ್ಯಕ್ತವಾಗಿದ್ದು, ಬಹುತೇಕ ಇದೇ ಮಾರ್ಗವನ್ನು ಸರ್ಕಾರ ಘೋಷಿಸುವ ಸಾಧ್ಯತೆ ಇದೆ.
ಶೀಘ್ರದಲ್ಲೇ ಪ್ರಕಟ: ಸಭೆಯಲ್ಲಿ ಭಾಗವಹಿಸಿದ್ದ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ಸಿಂಗ್ ಖರೋಲಾ ಸರ್ಕಾರ ಶೀಘ್ರದಲ್ಲೇ ಅಂತಿಮ ಸಂಪರ್ಕ ಮಾರ್ಗ ಯಾವುದೆಂದು ಪ್ರಕಟಿಸಲಿದೆ ಎಂದು ‘ಕನ್ನಡಪ್ರಭ'ಕ್ಕೆ ತಿಳಿಸಿದರು. ಒಟ್ಟು ಪ್ರಸ್ತಾವನೆ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಆದರೆ, ಅಂತಿಮ ವಾಗಿ ಸರ್ಕಾರ ನಿರ್ಧಾರ ಪ್ರಕಟಿಸ ಬೇಕಿದೆ. ಸಭೆಯಲ್ಲಿ ಶಾಸಕ ಕೃಷ್ಣ ಬೈರೇಗೌಡ ಭಾಗವಹಿಸಿ ಅಭಿಪ್ರಾಯ ವ್ಯಕ್ತಪಡಿಸಿದರು ಎಂದರು.
ಇದೇ ವೇಳೆ ವಿಮಾನ ನಿಲ್ದಾಣಕ್ಕೆ ಪರ್ಯಾಯ ರಸ್ತೆ ಮಾರ್ಗ ಕಾಮಗಾ ರಿಗಳ ಕುರಿತೂ ಪ್ರಗತಿ ಪರಿಶೀಲನೆ ನಡೆಸಲಾಯಿತು. ಲೋಕೊ ೕಪಯೋಗಿ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
