ಜಿಎಸ್‌ಟಿಯಂತಹ ಐತಿಹಾಸಿಕ ಆರ್ಥಿಕ ಸುಧಾರಣೆ ಜಾರಿಗೊಳಿಸಿದ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗ ಆದಾಯ ತೆರಿಗೆ ಕ್ಷೇತ್ರದಲ್ಲೂ ಸುಧಾರಣೆಗೆ ಮುಂದಾಗಿದೆ. ಇದರ ಫಲವಾಗಿ ಹೆಚ್ಚು ಜನರು ತೆರಿಗೆ ಜಾಲಕ್ಕೆ ಸೇರ್ಪಡೆಯಾಗುವ ಹಾಗೂ ಈಗ ಇರುವ ತೆರಿಗೆ ಅಗ್ಗವಾಗುವ ಸಂಭವವಿದೆ.

ನವದೆಹಲಿ: ಜಿಎಸ್‌ಟಿಯಂತಹ ಐತಿಹಾಸಿಕ ಆರ್ಥಿಕ ಸುಧಾರಣೆ ಜಾರಿಗೊಳಿಸಿದ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗ ಆದಾಯ ತೆರಿಗೆ ಕ್ಷೇತ್ರದಲ್ಲೂ ಸುಧಾರಣೆಗೆ ಮುಂದಾಗಿದೆ. ಇದರ ಫಲವಾಗಿ ಹೆಚ್ಚು ಜನರು ತೆರಿಗೆ ಜಾಲಕ್ಕೆ ಸೇರ್ಪಡೆಯಾಗುವ ಹಾಗೂ ಈಗ ಇರುವ ತೆರಿಗೆ ಅಗ್ಗವಾಗುವ ಸಂಭವವಿದೆ.

ನೇರ ತೆರಿಗೆ ಸಂಹಿತೆ (ಡೈರೆಕ್ಟ್ ಟ್ಯಾಕ್ಸ್ ಕೋಡ್) ಜಾರಿಗಾಗಿ ಕೇಂದ್ರ ಸಮಿತಿಯೊಂದನ್ನು ರಚಿಸಿದ್ದು, ‘ಕಡಿಮೆ ಆದಾಯ ತೆರಿಗೆ ಹಾಗೂ ಹೆಚ್ಚು ತೆರಿಗೆದಾರರು’ ಎಂಬ ಗುರಿಯೊಂದಿಗೆ ಸಂಹಿತೆ ರೂಪಿಸಲು ಆ ಸಮಿತಿ ಮುಂದಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ.

ಹಾಗಂತ, ಪರಿಷ್ಕೃತ ತೆರಿಗೆ ದರಗಳು ಮುಂದಿನ ಬಜೆಟ್’ನಲ್ಲೇ ಘೋಷಣೆಯಾಗುವ ಸಾಧ್ಯತೆಗಳಿಲ್ಲ. ಕಳೆದ ನವೆಂಬರ್‌ನಲ್ಲಿ ನೇರ ತೆರಿಗೆ ಸಂಹಿತೆಗಾಗಿ ಸರ್ಕಾರ ಸಮಿತಿ ರಚಿಸಿ, ವರದಿ ಸಲ್ಲಿಕೆಗೆ ಆರು ತಿಂಗಳ ಕಾಲಾವಕಾಶ ನೀಡಿದೆ.

2019ರಿಂದ ಜಾರಿಗೆ ತರುವ ಕಾಲಮಿತಿಯನ್ನೂ ಹಾಕಿಕೊಂಡಿದೆಯಾದರೂ, ಅದು ವಿಳಂಬವಾಗಬಹುದು ಎಂದು ಹೇಳಲಾಗಿದೆ.