Asianet Suvarna News Asianet Suvarna News

ಕೆಪಿಎಸ್‌ಸಿ ಪರೀಕ್ಷಾ ವ್ಯವಸ್ಥೆ ಸಂಪೂರ್ಣ ಬದಲು?

ಕಂಪ್ಯೂಟರ್‌ ಆಧರಿತ ಸಿಬಿಆರ್‌ಟಿ ನಿಯಮ ಜಾರಿಗೆ ತರಲು ಸಿದ್ಧತೆ | ಇದರಲ್ಲಿ ಪ್ರಶ್ನೆಪತ್ರಿಕೆ ಬಹಿರಂಗ, ಪರೀಕ್ಷಾ ಅಕ್ರಮಗಳಿಗೆ ಕಡಿವಾಣ
 
Govt mulling to change KPSC system

ಬೆಂಗಳೂರು: ಸರ್ಕಾರಿ ಸೇವೆಗಳ ನೇಮಕಾತಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳ ಫಲಿತಾಂಶ ಶೀಘ್ರ ಪ್ರಕಟ, ಸುಧಾರಣೆ ಮತ್ತು ಮತ್ತಷ್ಟುಪಾರದರ್ಶಕತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕಂಪ್ಯೂಟರ್‌ ಆಧಾರಿತ ನೇಮಕಾತಿ ನಿಯಮ (ಸಿಬಿಆರ್‌ಟಿ) ಜಾರಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಮುಂದಾಗಿದೆ.

ಆಯೋಗ ನಡೆಸುವ ಲಿಖಿತ ಪರೀಕ್ಷೆಗಳ ಫಲಿತಾಂಶ ಪ್ರಕಟಣೆ ವಿಳಂಬವಾಗುತ್ತಿ ರುವುದು ಅಭ್ಯರ್ಥಿಗಳಲ್ಲಿ ಗೊಂದಲಕ್ಕೆ ಕಾರಣವಾ ಗುತ್ತದೆ. ನೇಮಕಾತಿಗೆ ಅಧಿಸೂಚನೆ ಹೊರಡಿಸಿ 2-3 ವರ್ಷ ಕಳೆದರೂ ಪರೀಕ್ಷಾ ಪ್ರಕ್ರಿಯೆಗಳು ಪೂರ್ಣಗೊಳ್ಳುತ್ತಿಲ್ಲ. ಹಾಗಾಗಿ ಪ್ರಸ್ತುತ ನಡೆಸುತ್ತಿರುವ ಪರೀಕ್ಷಾ ಪದ್ಧತಿ ಸಂಪೂರ್ಣ ಬದಲಾಯಿಸಲು ನಿರ್ಣಯಿ ಸಿದ್ದು, ಸಿಬಿಆರ್‌ಟಿ ಪದ್ಧತಿ ಜಾರಿ ಮಾಡಿದಲ್ಲಿ ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಬಹುದಾಗಿದೆ. ಜತೆಗೆ ಫಲಿತಾಂಶವನ್ನು ಶೀಘ್ರ ಪ್ರಕಟಿಸಬಹುದಾಗಿದೆ.

ಈ ವ್ಯವಸ್ಥೆ ಜಾರಿಯಾದಲ್ಲಿ ಪ್ರಶ್ನೆ ಪತ್ರಿಕೆ ಗಳನ್ನು ಮುದ್ರಿಸಿ ರಾಜ್ಯಾದ್ಯಂತ ಹಂಚಿಕೆ ಮಾಡುವುದು ಹಾಗೂ ಅವುಗಳಿಗೆ ಭದ್ರತೆ ಒದಗಿಸಲು ಆಗುತ್ತಿರುವ ವೆಚ್ಚ ಉಳಿಯಲಿದೆ. ಜತೆಗೆ ಪ್ರಶ್ನೆ ಪತ್ರಿಕೆ ಸೋರಿಕೆಯಂ ತಹ ಆರೋಪಗಳು ಕೇಳಿ ಬರಲು ಅವಕಾಶವಿರುವು ದಿಲ್ಲ. ಆದರೆ, ಈ ವ್ಯವಸ್ಥೆಯಲ್ಲಿ ಪರೀಕ್ಷೆ ಬರೆಯಲು ಎಲ್ಲಾ ಅಭ್ಯ ರ್ಥಿಗಳಿಗೂ ಕಂಪ್ಯೂಟರ್‌ ಜ್ಞಾನ ಕಡ್ಡಾಯ. ಗೋವಾ ರಾಜ್ಯದಲ್ಲಿ ನಡೆಯುವ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಈಗಾಗಲೇ ಸಿಬಿ ಆರ್‌ಟಿ ಪರೀಕ್ಷಾ ಪದ್ಧತಿ ಜಾರಿ ಮಾಡಲಾಗಿದೆ. ಅಲ್ಲಿ ನಡೆಯುವ ಪರೀಕ್ಷೆಗಳು ದಕ್ಷತೆ ಮತ್ತು ಪಾರದರ್ಶಕತೆಯಿಂದ ನಡೆಯುತ್ತಿವೆ. ಅಲ್ಲದೆ, ದೇಶದಲ್ಲಿ ನಡೆಯುವ ಬ್ಯಾಂಕಿಂಗ್‌ ಮತ್ತು ರೈಲ್ವೆ ನೇಮಕಾತಿಯ ಲ್ಲಿಯೂ ಇದೇ ಪದ್ಧತಿಯಿದ್ದು, ನೇಮಕಾತಿಗಳು ಸುಸೂತ್ರವಾಗಿ ನಡೆಯುತ್ತಿವೆ. ಆ ಪರೀಕ್ಷೆಗಳ ಮೇಲೆ ಯಾವುದೇ ಆರೋಪಗಳು ಬರುತ್ತಿಲ್ಲ. ಅದೇ ರೀತಿಯಲ್ಲಿ ಕೆಪಿಎಸ್‌ಸಿ ಪರೀಕ್ಷೆಗಳನ್ನು ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ.

ರೂ.100 ಕೋಟಿ ಬೇಡಿಕೆ: ಪರೀಕ್ಷಾ ಪದ್ಧತಿಯಲ್ಲಿ ಸಿಬಿಆರ್‌ಟಿ ನಿಯಮಗಳನ್ನು ಅಳವಡಿಸುವುದಕ್ಕಾಗಿ ವಾರ್ಷಿಕ ಕನಿಷ್ಠ ರೂ. 100 ಕೋಟಿ ಬಂಡವಾಳದ ಅಗತ್ಯವಿದೆ. ಪ್ರಸ್ತುತ ರಾಜ್ಯ ಸರ್ಕಾರ ರೂ. 42 ಕೋಟಿ ನೀಡುತ್ತಿದೆ. ಹೆಚ್ಚುವರಿ ಮೊತ್ತ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಲಾಗಿದೆ. ತಕ್ಷಣ ಹಣ ಬಿಡುಗಡೆ ಮಾಡಲು ಕರ್ನಾಟಕ ಪಾರದರ್ಶಕ ಕಾಯಿ ದೆಯ ಪ್ರಕಾರ ಸಾಧ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಪ್ರಸನ್ನ ಕುಮಾರ್‌ ಅವರು ಹೇಳಿದ್ದಾರೆ. -ಕನ್ನಡಪ್ರಭ

(ಸಾಂದರ್ಭಿಕ ಚಿತ್ರ)

Latest Videos
Follow Us:
Download App:
  • android
  • ios