ಅನಗತ್ಯ ಸಿಸೇರಿಯನ್ ಹೆರಿಗೆ ಮಾಡಿಸುವ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಚಿಂತಿಸಿದೆ. ಆಸ್ಪತ್ರೆಯಲ್ಲಿ ಸಿಸೇರಿಯನ್ ಹೆರಿಗೆಯ ನೈಜ್ಯ ಸಂಖ್ಯೆಯನ್ನು ಆಸ್ಪತ್ರೆಯ ಸ್ವಾಗತ ವಿಭಾಗದಲ್ಲಿ ಪ್ರಕಟಿಸದಿದ್ದಲ್ಲಿ, ಅಂತಹ ಖಾಸಗಿ ಆಸ್ಪತ್ರೆಯ ನೋಂದಣಿ ರದ್ದುಗೊಳಿಸಲು ಬೇಕಾಗುವ ನಿಯಮ ರೂಪಿಸಲು ಚಿಂತಿಸಲಾಗಿದೆ.

ನವದೆಹಲಿ: ಅನಗತ್ಯ ಸಿಸೇರಿಯನ್ ಹೆರಿಗೆ ಮಾಡಿಸುವ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಚಿಂತಿಸಿದೆ.

ಆಸ್ಪತ್ರೆಯಲ್ಲಿ ಸಿಸೇರಿಯನ್ ಹೆರಿಗೆಯ ನೈಜ್ಯ ಸಂಖ್ಯೆಯನ್ನು ಆಸ್ಪತ್ರೆಯ ಸ್ವಾಗತ ವಿಭಾಗದಲ್ಲಿ ಪ್ರಕಟಿಸದಿದ್ದಲ್ಲಿ, ಅಂತಹ ಖಾಸಗಿ ಆಸ್ಪತ್ರೆಯ ನೋಂದಣಿ ರದ್ದುಗೊಳಿಸಲು ಬೇಕಾಗುವ ನಿಯಮ ರೂಪಿಸಲು ಚಿಂತಿಸಲಾಗಿದೆ.

ಭಾರತದಲ್ಲಿ ಶೇ.55.75 ಮಕ್ಕಳ ಹೆರಿಗೆ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮೂಲಕ ನಡೆಯುತ್ತಿದೆ. ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ಸಿಸೇರಿಯನ್ ಹೆರಿಗೆ ಮಾಡಬೇಕು, ಇದು ಒಟ್ಟು ಹೆರಿಗೆಯಲ್ಲಿ ಶೇ.10 ಶೇ.15 ರೊಳಗಿರಬೇಕು ಎಂದು ವಿಶ್ವಸಂಸ್ಥೆಯ ಮಾರ್ಗಸೂಚಿಯಿದೆ.