ಈ ಮುನ್ನ 2005ರಲ್ಲಿ ಜಾನಪದ ಮತ್ತು ಯಕ್ಷಗಾನ ವಿಭಾಗದಲ್ಲಿ ರಾಜಶೇಖರ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿತ್ತು
ಮೈಸೂರು(ಅ.31): ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯಲ್ಲೂ ಪ್ರಮಾದವಾಗಿದ್ದು, ಕಲಾವಿದರೊಬ್ಬರಿಗೆ 2ನೇ ಬಾರಿ ಪ್ರಶಸ್ತಿ ಸಂದಿದೆ. ಮೈಸೂರಿನ ಜಾನಪದ ತಜ್ಞ ಡಾ. ಪಿ.ಕೆ. ರಾಜಶೇಖರ್ ಅವರನ್ನು ಎರಡನೇ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ರಾಜಶೇಖರ್ ಅವರನ್ನು ಈ ಬಾರಿ ಸಂಕೀರ್ಣ ವಿಭಾಗದಲ್ಲಿ ಪ್ರಶಸ್ತಿಗೆ ಪರಿಗಣಿಸಲಾಗಿದೆ. ಈ ಮುನ್ನ 2005ರಲ್ಲಿ ಜಾನಪದ ಮತ್ತು ಯಕ್ಷಗಾನ ವಿಭಾಗದಲ್ಲಿ ರಾಜಶೇಖರ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿ ಪರಿಷ್ಕರಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ತಮಗೆ 2ನೇ ಬಾರಿ ಪ್ರಶಸ್ತಿ ಬಂದಿದ್ದನ್ನು ರಾಜಶೇಖರ್ ಸುವರ್ಣ ನ್ಯೂಸ್ ಸೋದರ ಪತ್ರಿಕೆ ‘ಕನ್ನಡಪ್ರಭ’ಕ್ಕೆ ಖಚಿತಪಡಿಸಿದ್ದಾರೆ. ಎರಡನೇ ಬಾರಿ ಪ್ರಶಸ್ತಿ ಪಡೆಯಬಾರದು ಎಂಬ ನಿಯಮವಿದ್ದರೆ, ಅದನ್ನು ಸ್ವೀಕರಿಸುವುದಿಲ್ಲ ಎಂದಿದ್ದಾರೆ.
