Asianet Suvarna News Asianet Suvarna News

ಕಣ್ಮರೆಯಾಗಲಿವೆ ರಾಜ್ಯದ 1900 ಬಾರುಗಳು: ಬೊಕ್ಕಸಕ್ಕೆ ಹಾನಿಯಾಗದಂತೆ ಸರ್ಕಾರ ಮಾಡುತ್ತಿದೆ ಪ್ಲಾನ್!

ಸುಪ್ರೀಂಕೋರ್ಟ್​​ ಆದೇಶದ ಮೇರೆಗೆ ರಾಜ್ಯದಲ್ಲಿರುವ ಸುಮಾರು 1900 ಬಾರ್​'ಗಳಿಗೆ ಇಂದು ಮಧ್ಯರಾತ್ರಿಯಿಂದಲೇ ಬೀಗ ಬೀಳಲಿದೆ. ಖಜಾನೆ ಹರಿದು ಬರುವ ದೊಡ್ಡ ಆದಾಯಕ್ಕೆ ಕತ್ತರಿ ಬೀಳುವ ಸಾಧ್ಯತೆ ಇದ್ದು, ಬಾರ್​ಗಳನ್ನು ಉಳಿಸಿಕೊಳ್ಳಲು ರಾಜ್ಯ ಸರ್ಕಾರ ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಕೊನೆಯ ದಿನ ಬಂದ್ರೂ ಬಾರ್​ ಮಾಲೀಕರು ಮಾತ್ರ ಇನ್ನೂ ಗೊಂದಲದಲ್ಲೇ ಇದ್ದಾರೆ.

Govt making plan to avoid the loss due to liquor shop

ನವದೆಹಲಿ(ಜೂ.30): ಸುಪ್ರೀಂಕೋರ್ಟ್​​ ಆದೇಶದ ಮೇರೆಗೆ ರಾಜ್ಯದಲ್ಲಿರುವ ಸುಮಾರು 1900 ಬಾರ್​'ಗಳಿಗೆ ಇಂದು ಮಧ್ಯರಾತ್ರಿಯಿಂದಲೇ ಬೀಗ ಬೀಳಲಿದೆ. ಖಜಾನೆ ಹರಿದು ಬರುವ ದೊಡ್ಡ ಆದಾಯಕ್ಕೆ ಕತ್ತರಿ ಬೀಳುವ ಸಾಧ್ಯತೆ ಇದ್ದು, ಬಾರ್​ಗಳನ್ನು ಉಳಿಸಿಕೊಳ್ಳಲು ರಾಜ್ಯ ಸರ್ಕಾರ ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಕೊನೆಯ ದಿನ ಬಂದ್ರೂ ಬಾರ್​ ಮಾಲೀಕರು ಮಾತ್ರ ಇನ್ನೂ ಗೊಂದಲದಲ್ಲೇ ಇದ್ದಾರೆ.

ಇಂದು ಮಧ್ಯರಾತ್ರಿಯಿಂದ  ಬಾರ್ ಬಂದ್!

ಸುಪ್ರೀಂ ಕೋರ್ಟ್​ ಆದೇಶದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ 500 ಮೀಟರ್​ ವ್ಯಾಪ್ತಿಯಲ್ಲಿರುವ ಬಾರುಗಳಿಗೆ ಇಂದು ಮಧ್ಯ ರಾತ್ರಿಯಿಂದಲೇ ಬೀಗ ಬೀಳಲಿದೆ. ಬಾರುಗಳನ್ನು ಮುಚ್ಚಲು ಜೂನ್​ 30ರವರೆಗೆ ಅವಕಾಶ ನೀಡಿತ್ತು. ಹೀಗಾಗಿ ಬೆಂಗಳೂರು ನಗರದ 340 ಬಾರುಗಳು ಸೇರಿದಂತೆ 1900 ಬಾರುಗಳು ಕಣ್ಮರೆಯಾಗಲಿವೆ. ರಾಜ್ಯದ ನಗರ ಪಟ್ಟಣದಲ್ಲಿ ಹಾದು ಹೋಗುವ 858 ಕಿಲೋ ಮೀಟರ್​ ರಾಷ್ಟ್ರೀಯ ಹೆದ್ದಾರಿಯನ್ನು ಸ್ಥಳೀಯ ರಸ್ತೆಗಳು ಎಂದು ಘೋಷಿಸುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಮಧ್ಯೆ ರಾಜ್ಯ ಹೆದ್ದಾರಿಗಳನ್ನು ಡಿನೋಟಿಫೈ ಮಾಡುವ ಮೂಲಕ ಸ್ಥಳೀಯ ರಸ್ತೆಗಳನ್ನಾಗಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಮೂಲಕ 1600 ಬಾರುಗಳನ್ನು ಉಳಿಸಿಕೊಂಡು ಬೊಕ್ಕಸಕ್ಕೆ ಹಾನಿಯಾಗದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ ಇನ್ನಿಲ್ಲದ ಕಸರತ್ತು ಮುಂದುವರೆಸಿದೆ.

ಬೆಂಗಳೂರಿನ ಕೇಂದ್ರ ಭಾಗವಾಗಿರುವ ಎಂಜಿ ರಸ್ತೆ. ಕೆಜಿ ರಸ್ತೆ, ಕ್ವೀನ್ಸ್​ ರಸ್ತೆ, ಬಳ್ಳಾರಿ ರಸ್ತೆ ಸೇರಿದಂತೆ 45 ಕಿಲೋ ಮೀಟರ್​​ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಗೆ ಬರಲಿದೆ. ಹೀಗಾಗಿ ರಾಜಧಾನಿಯ 340 ಬಾರ್'​ಗಳು ಕ್ಲೋಸ್​ ಆಗಲಿವೆ. ಬಾರುಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ  ಬಾರ್​ ಅಸೋಸೊಯೇಷನ್​​ ಸುಪ್ರೀಂ ಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಿದ್ದು, ಆದೇಶವನ್ನು ಪ್ರಶ್ನಿಸಿದ್ದು, ಈವರೆಗೂ ಆದೇಶ ಆದೇಶ ಹೊರಬಿದ್ದಿಲ್ಲ. ಮತ್ತೊಂದೆಡೆ ರಾಜ್ಯ ಸರ್ಕಾರವೂ ಕೂಡ ನಗರ ಮತ್ತು ಪಟ್ಟಣಗಳಲ್ಲಿ ಹಾದು ಹೋಗುವ ರಸ್ತೆಗಳನ್ನು ಕಾರ್ಪೋರೇಷನ್​​ ವ್ಯಾಪ್ತಿಗೆ ನೀಡಿ ವಿನಾಯ್ತಿ ನೀಡುವಂತೆ ಮನವಿ ಮಾಡಿದ್ದು, ಈ ಸಂಬಂಧವೂ ಕೇಂದ್ರ ಸಾರಿಗೆ ಇಲಾಖೆಯಿಂದ ಯಾವುದೇ ಉತ್ತರ ಬಂದಿಲ್ಲ.

ರಾಜ್ಯದ ಬೊಕ್ಕಸಕ್ಕೆ ಅಬಕಾರಿಯಿಂದಲೇ ಹೆಚ್ಚಿನ ಆದಾಯ ಬರುತ್ತಿದೆ. ಈ ಆದಾಯವನ್ನು ಕಳೆದುಕೊಳ್ಳಲು ರಾಜ್ಯ ಸರ್ಕಾರ ಸುತಾರಂ ಸಿದ್ದವಿಲ್ಲ. ಹೀಗಾಗಿ ರಾಜ್ಯ ರಸ್ತೆಗಳನ್ನು ಡಿನೋಟಿಫೈ ಮಾಡಿ ಸ್ಥಳೀಯ ರಸ್ತೆಗಳು ಎಂದು ನೋಟಿಫೀಕೇಷನ್​ ಹೊರಡಿಸಲು ಸಿದ್ದತೆ ನಡೆಸಿದೆ. ಹೀಗಾಗಿ ರಾಜ್ಯ ಹೆದ್ದಾರಿಯಲ್ಲಿರುವ ಬಾರ್​ಗಳ ಮಾಲೀಕರು ಕೊಂಚ ರಿಲೀಫ್​ ಆಗಿದ್ದು, ಇನ್ನೂ ಯಾವುದೇ ಆದೇಶ ಹೊರಬಿದ್ದಿಲ್ಲ. ಜುನ್​ 30ಕ್ಕೆ ಮುಕ್ತಾಯವಾಗಲಿರುವ ಬಾರ್​​ ಲೈಸೆನ್ಸ್​ ಅವದಿಯನ್ನು ಸರ್ಕಾರ ಇನ್ನೂ ನವೀಕರಣ ಮಾಡದೇ ಇರೋದು ಮಾಲೀಕರ ತಲೆನೋವಿಗೆ ಕಾಅರಣವಾಗಿದೆ. ಒಟ್ಟಾರೆ ಸುಪ್ರೀಂ ಕೋರ್ಟ್​ ಆದೇಶ ಬಾರ್​ ಮಾಲೀಕರು ಹಾಗೂ ರಾಜ್ಯ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದ್ದು, ಬಾರ್​ಗಳನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮುಂದುವರೆಸಿದೆ.

Follow Us:
Download App:
  • android
  • ios