ಕೋಟಿಗಟ್ಟಲೆ ಅಕ್ರಮ ಆಸ್ತಿ ಗಳಿಸಿರುವ ಆರೋಪದ ಮೇಲೆ ಅಮಾನತಾಗಿರುವ ಸರಕಾರಿ ಅಧಿಕಾರಿ ಚಿಕ್ಕರಾಯಪ್ಪಗೆ ಮತ್ತೆ ರಾಜ್ಯ ಸರ್ಕಾರ ಹುದ್ದೆ ನೀಡಲು ಮುಂದಾಗಿದೆ. ಅಮಾನತಾಗಿರುವ ಚಿಕ್ಕರಾಮಪ್ಪಗೆ ಕೆಆರ್ ಎಸ್ ರಿಸರ್ಚ್ ಸೆಂಟರ್ ನಿರ್ದೇಶಕ ಹುದ್ದೆ ನೀಡಲು ಸರ್ಕಾರ ಚಿಂತನೆ ನಡೆಸಿದೆ.
ಬೆಂಗಳೂರು(ಅ.29): ಕೋಟಿಗಟ್ಟಲೆ ಅಕ್ರಮ ಆಸ್ತಿ ಗಳಿಸಿರುವ ಆರೋಪದ ಮೇಲೆ ಅಮಾನತಾಗಿರುವ ಸರಕಾರಿ ಅಧಿಕಾರಿ ಚಿಕ್ಕರಾಯಪ್ಪಗೆ ಮತ್ತೆ ರಾಜ್ಯ ಸರ್ಕಾರ ಹುದ್ದೆ ನೀಡಲು ಮುಂದಾಗಿದೆ. ಅಮಾನತಾಗಿರುವ ಚಿಕ್ಕರಾಮಪ್ಪಗೆ ಕೆಆರ್ ಎಸ್ ರಿಸರ್ಚ್ ಸೆಂಟರ್ ನಿರ್ದೇಶಕ ಹುದ್ದೆ ನೀಡಲು ಸರ್ಕಾರ ಚಿಂತನೆ ನಡೆಸಿದೆ.
ಈಗಾಗಲೇ ಸಿಎಂ ಸಿದ್ದರಾಮಯ್ಯ ನಾಲ್ಕು ಡಿಪಿಎಆರ್ ಸಂಸ್ಥೆಗಳಿಗೆ ಪತ್ರ ಬರೆದು ಇಬ್ಬರನ್ನು ಪುನರ್ ಸೇವೆಗೆ ಬಳಸಿಕೊಳ್ಳುವ ಬಗ್ಗೆ ಅಭಿಪ್ರಾಯ ಕೇಳಿದ್ದರು. ಆದರೆ ಯಾವುದೇ ಸಂಸ್ಥೆ ಉತ್ತರ ನೀಡಿರಲಿಲ್ಲ. ಹೀಗಾಗಿ ನಾವು ಯಾವುದೇ ಅಭಿಪ್ರಾಯ ಕೊಡಲು ಬರುವುದಿಲ್ಲ ನೀವು ಹೇಳಿದಂತೆ ಮಾಡುತ್ತೇವೆ ಎಂದು ಡಿಪಿಎಆರ್ ಸಿಎಂಗೆ ತನ್ನ ಅಭಿಪ್ರಾಯ ತಿಳಿಸಿದೆ.
ಹೀಗಾಗಿ ಸಿಎಂ ಚಿಕ್ಕರಾಯಪ್ಪಗೆ ಕೆಆರ್ ಎಸ್ ರಿಸರ್ಚ್ ಸೆಂಟರ್ ನಿರ್ದೇಶಕರಾಗಿ ನೇಮಕಗೊಳಿಸಲು ತೀರ್ಮಾನಿಸಿದ್ದಾರೆ ಎನ್ನಲಾಗ್ತಿದೆ. ಆದ್ರೆ ಜಯಚಂದ್ರ ವಿಚಾರದಲ್ಲಿ ಸರ್ಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎನ್ನಲಾಗ್ತಿದೆ.
