ಇದರಿಂದ ಜನರು ಪೆಟ್ರೋಲ್ ಬಂಕ್'ಗಳಲ್ಲಿ ಸರದಿ ನಿಲ್ಲುವುದು ತಪ್ಪಬಹುದು ಎಂಬುದು ಸರಕಾರದ ಲೆಕ್ಕಾಚಾರ. ಆದರೆ, ಯಾವಾಗಿನಿಂದ ಈ ಯೋಜನೆ ಜಾರಿಗೆ ಬರುತ್ತದೆ? ಯಾವ್ಯಾವ ಪೆಟ್ರೋಲಿಯಮ್ ಕಂಪನಿಗಳು ಇದಕ್ಕೆ ಸಹಕಾರ ನೀಡುತ್ತವೆ? ಇತ್ಯಾದಿ ವಿವರಗಳು ಮುಂದಿನ ದಿನಗಳಲ್ಲಿ ಸಿಗಬಹುದು.

ನವದೆಹಲಿ(ಏ. 21): ಪೆಟ್ರೋಲ್ ಬಂಕ್'ಗಳಲ್ಲಿ ಉದ್ದುದ್ದ ಕ್ಯೂ ನಿಲ್ಲುವ ತಾಪತ್ರಯ ಇನ್ಮುಂದೆ ತಪ್ಪಬಹುದು. ಪೆಟ್ರೋಲ್, ಡೀಸೆಲ್ ಸೇರಿದಂತೆ ಪೆಟ್ರೋಲಿಯಂ ಉತ್ಪನ್ನಗಳನ್ನು ಜನರ ಸ್ಥಳಗಳಿಗೇ ತಲುಪಿಸುವ ಹೊಸ ವ್ಯವಸ್ಥೆಗೆ ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಮುಂಗಡವಾಗಿ ಬುಕ್ ಮಾಡುವ ಗ್ರಾಹಕರಿಗೆ ಹೋಮ್ ಡೆಲಿವರಿ ಅವಕಾಶವಿರಲಿದೆ. ಇದರಿಂದ ಜನರು ಪೆಟ್ರೋಲ್ ಬಂಕ್'ಗಳಲ್ಲಿ ಸರದಿ ನಿಲ್ಲುವುದು ತಪ್ಪಬಹುದು ಎಂಬುದು ಸರಕಾರದ ಲೆಕ್ಕಾಚಾರ. ಆದರೆ, ಯಾವಾಗಿನಿಂದ ಈ ಯೋಜನೆ ಜಾರಿಗೆ ಬರುತ್ತದೆ? ಯಾವ್ಯಾವ ಪೆಟ್ರೋಲಿಯಮ್ ಕಂಪನಿಗಳು ಇದಕ್ಕೆ ಸಹಕಾರ ನೀಡುತ್ತವೆ? ಇತ್ಯಾದಿ ವಿವರಗಳು ಮುಂದಿನ ದಿನಗಳಲ್ಲಿ ಸಿಗಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೇ ವೇಳೆ, ಮೇ 1ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ನಿತ್ಯವೂ ಪರಿಷ್ಕೃತವಾಗಲಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಇಲ್ಲಿಯೂ ಆಗಿಂದಾಗ್ಗೆ ದರ ವ್ಯತ್ಯಯವಾಗಲಿದೆ.