ರಾಜ್ಯ ಸರ್ಕಾರ ಆಯೋಜಿಸುತ್ತಿರುವ ಟಿಪ್ಪು ಸುಲ್ತಾನ್ ಜಯಂತಿಗೆ ಬಿಜೆಪಿ ವಿರೋಧ ಮುಂದುವರಿದಿದೆ. ಇತ್ತ ಟಿಪ್ಪು ಜಯಂತಿ ಆಚರಣೆ ಮಾಡಿಯೇ ಸಿದ್ಧ ಎಂದು ಸರ್ಕಾರ ಹಠಕ್ಕೆ ಬಿದ್ದಿದೆ. ಇದರ ನಡುವೆಯೇ ಇಂದು ಬಿಜೆಪಿ ಬೆಂಗಳೂರಿನಲ್ಲಿ ಟಿಪ್ಪು ವಿರೋಧಿ ಸಮಾವೇಶ ಕೂಡ ಏರ್ಪಡಿಸಿದೆ.
ಬೆಂಗಳೂರು(ಅ.23): ರಾಜ್ಯ ಸರ್ಕಾರ ಆಯೋಜಿಸುತ್ತಿರುವ ಟಿಪ್ಪು ಸುಲ್ತಾನ್ ಜಯಂತಿಗೆ ಬಿಜೆಪಿ ವಿರೋಧ ಮುಂದುವರಿದಿದೆ. ಇತ್ತ ಟಿಪ್ಪು ಜಯಂತಿ ಆಚರಣೆ ಮಾಡಿಯೇ ಸಿದ್ಧ ಎಂದು ಸರ್ಕಾರ ಹಠಕ್ಕೆ ಬಿದ್ದಿದೆ. ಇದರ ನಡುವೆಯೇ ಇಂದು ಬಿಜೆಪಿ ಬೆಂಗಳೂರಿನಲ್ಲಿ ಟಿಪ್ಪು ವಿರೋಧಿ ಸಮಾವೇಶ ಕೂಡ ಏರ್ಪಡಿಸಿದೆ.
ಸರ್ಕಾರದ ದುಡ್ಡಿನಲ್ಲಿ ಜಯಂತಿ ಆಚರಣೆ ಮಾಡದೇ ಕಾಂಗ್ರೆಸ್ ಕಚೇರಿಯಲ್ಲಿ ಮಾಡಿಕೊಳ್ಳಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದರೆ, ಬಿಜೆಪಿಯವರು ಯಾರೂ ಕೂಡಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಪ್ರಕಟಿಸಿದ್ದಾರೆ.
ಈ ಮಧ್ಯೆ ಇಂದು ಬೆಂಗಳೂರಿನಲ್ಲಿ ಬಿಜೆಪಿ ಟಿಪ್ಪು ಜಯಂತಿ ಆಚರಣೆ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ರಾಜ್ಯಮಟ್ಟದ ಸಮಾವೇಶ ಆಯೋಜಿಸಿದೆ. ಪಕ್ಷದ ಹಿಂದುಳಿದ ವರ್ಗಗಳ ನಾಯಕರಿಗೆ ಸಮಾವೇಶದ ಮುಂದಾಳತ್ವ ನೀಡಿದ್ದು, ಸಮಾವೇಶಕ್ಕೆ ಹಿಂದುಳಿದ ವರ್ಗದವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಲು ಯೋಜಿಸಿದೆ.
