ರದ್ದಾಗಿರುವ ಪಾನ್'ಕಾರ್ಡ್'ಗಳಲ್ಲಿ ನಿಮ್ಮದಿದ್ದರೆ ಆದಾಯತೆರಿಗೆಯ ವೆಬ್'ಸೈಟ್ https://incometaxindiaefiling.gov.in. ಗೆ ಭೇಟಿ ನೀಡಿ Know Your PAN"  ಯನ್ನು ಕ್ಲಿಕಿಸಿದರೆ ಹೋಮ್'ಪೇಜ್'ನ ಎಡಭಾಗದಲ್ಲಿ 'ಸರ್ವೀಸಸ್' ಎಂಬ ಆಯ್ಕೆ ಬರುತ್ತದೆ.

ನವದೆಹಲಿ(ಆ. 07): ತೆರಿಗೆ ವಂಚನೆ ತಡೆಯುವ ಸಲುವಾಗಿ ಕೇಂದ್ರ ಸರ್ಕಾರ ಈ ವರ್ಷದ ಜುಲೈ 27ರ ಅಂತ್ಯಕ್ಕೆ 11.44 ಲಕ್ಷ ಪಾನ್'ಕಾರ್ಡ್'ಗಳನ್ನು ರದ್ದುಗೊಳಿಸಿದೆ.

ಆದಾಯ ತೆರಿಗೆ ಪಾವತಿಸುವಾಗ ಪಾನ್'ಕಾರ್ಡ್ ಜೊತೆಗೆ ಆಧಾರ್'ಅನ್ನು ಸಂಪರ್ಕ'ಗೊಳಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿ ಒಂದು ಪಾನ್'ಕಾರ್ಡ್ ಪಡೆಯಬಹುದಾಗಿದೆ. ತೆರಿಗೆ ಪಾವತಿಸುವ ಸಂದರ್ಭದಲ್ಲಿ ಬಹುತೇಕರು ನಕಲಿ ಪಾನ್'ಕಾರ್ಡ್'ಗಳನ್ನು ಸಲ್ಲಿಸಿರುವುನ್ನು ಕೇಂದ್ರ ಸರ್ಕಾರ ಪತ್ತೆಹಚ್ಚಿದೆ.

ರದ್ದಾಗಿರುವ ಪಾನ್'ಕಾರ್ಡ್'ಗಳಲ್ಲಿ ನಿಮ್ಮದಿದ್ದರೆ ಆದಾಯತೆರಿಗೆಯ ವೆಬ್'ಸೈಟ್ https://incometaxindiaefiling.gov.in. ಗೆ ಭೇಟಿ ನೀಡಿ Know Your PAN" ಯನ್ನು ಕ್ಲಿಕಿಸಿದರೆ ಹೋಮ್'ಪೇಜ್'ನ ಎಡಭಾಗದಲ್ಲಿ 'ಸರ್ವೀಸಸ್' ಎಂಬ ಆಯ್ಕೆ ಬರುತ್ತದೆ. ಈ ಆಯ್ಕೆಯಲ್ಲಿ ನಿಮ್ಮ ಎಲ್ಲ ಮಾಹಿತಿಗಳನ್ನು ತುಂಬಿ 'ಸಬ್'ಮಿಟ್' ಮಾಡಿದರೆ ನಿಮ್ಮ ರಿಜಿಸ್ಟರ್ಡ್ ಮೊಬೈಲ್'ಗೆ ಒಟಿಪಿ ಸಂಖ್ಯೆ ಬರುತ್ತದೆ.

ಒಂದು ವೇಳೆ ಅಧಿಕೃತ ಪಾನ್ ಕಾರ್ಡ್ ಆಗಿದ್ದರೆ ಆಕ್ಟೀವ್ ಅಗುವುದರೊಂದಿಗೆ ಯಾವುದೇ ಸಮಸ್ಯೆಯಿರುವುದಿಲ್ಲ. ನಕಲಿ ಪಾನ್'ಕಾರ್ಡ್ ಪಡೆದುಕೊಂಡಿದ್ದರೆ ಇನ್ನು ಹೆಚ್ಚಿನ ಮಾಹಿತಿ ಬೇಕೆಂದು ವೆಬ್'ಸೈಟ್ ಪುಟದಲ್ಲಿ ತೋರಿಸುತ್ತದೆ.