ನವದೆಹಲಿ[ಜೂ.19]: 2017ರಲ್ಲಿ 7ನೇ ವೇತನ ಆಯೋಗ ಅನುಷ್ಠಾನದ ಬಳಿಕ ಶಾಂತಿಯುತ ಪ್ರದೇಶಗಳಲ್ಲಿ ತಡೆಹಿಡಿಯಲಾಗಿದ್ದ ಸೇನಾಧಿಕಾರಿಗಳ ಪಡಿತರ ಆಹಾರ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಪುನಃ ಜಾರಿಗೊಳಿಸಿದೆ.

ಸೇನಾಧಿಕಾರಿಗಳ ಪಡಿತರ ಆಹಾರವನ್ನು ಪುನಃ ಜಾರಿಗೊಳಿಸುವ ವಿಚಾರದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವೈಯಕ್ತಿಕವಾಗಿ ಮಧ್ಯಸ್ಥಿಕೆ ವಹಿಸಿದ್ದಾರೆ ಎನ್ನಲಾಗಿದೆ. ಶಾಂತಿಯುತ ಪ್ರದೇಶಗಳಲ್ಲಿರುವ ಭೂಸೇನೆ, ವಾಯು ಮತ್ತು ನೌಕಾಸೇನೆಯ ಎಲ್ಲ ಅಧಿ ಕಾರಿಗಳಿಗೆ ಪಡಿತರ ಆಹಾರ ನೀಡುವ ವ್ಯವಸ್ಥೆ ಮರು ಜಾರಿಗೆ ಮಾಡಲಾಗಿದೆ ಎಂದು ಮಂಗಳವಾರ ಸಚಿವ ರಾಜನಾಥ್ ಸಿಂಗ್ ಘೋಷಿಸಿದರು.

2017ರಲ್ಲಿ 7ನೇ ವೇತನ ಆಯೋಗ ಜಾರಿಯಾದ ಬಳಿಕ ಸೇನಾಧಿ ಕಾರಿಗಳ ಪಡಿತರ ಆಹಾರ ಪೂರೈಕೆಯನ್ನು ರದ್ದುಗೊಳಿಸಲಾಗಿತ್ತು. ಇದರ ಬದಲಾಗಿ ಪಡಿತರ ಹಣ ಭತ್ಯೆ ಎಂದು ಮಾಸಿಕ ೯೬