Asianet Suvarna News Asianet Suvarna News

ಸ್ಟೀಲ್ ಫ್ಲೈಓವರ್ ಗಾಗಿ ಸುಳ್ಳು ಹೇಳಿದ ಸರ್ಕಾರ

ಬೆಂಗಳೂರಿನಲ್ಲಿ ಸ್ಟೀಲ್​ಫ್ಲೈಓವರ್ ನಿರ್ಮಿಸಲು ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸ್ತಿದೆ. ಇದಕ್ಕಾಗಿ ಸರ್ಕಾರ ದೊಡ್ಡದೊಂದು ಸುಳ್ಳು ಹೇಳಿ ಸಿಕ್ಕಿ ಬಿದ್ದಿದೆ. ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ರಾಜ್ಯಸಭೆಯಲ್ಲಿ ಕರ್ನಾಟಕ ಸರ್ಕಾರ ಸ್ಟೀಲ್​​ಫ್ಲೈಓವರ್ ಗಾಗಿ ಅಗತ್ಯ ಜಾಗ ಕೇಳಿತ್ತಾ ಎಂದು ರಕ್ಷಣಾ ಸಚಿವಾಲಯದಿಂದ ಮಾಹಿತಿ ಕೇಳಿದ್ದರು. ರಕ್ಷಣಾ ಸಚಿವಾಲಯ ನೀಡಿದ ಉತ್ತರದಿಂದ ರಾಜ್ಯ ಸರ್ಕಾರ ಸ್ಟೀಲ್​ಫ್ಲೈಓವರ್​ಗೆ ಭೂಸ್ವಾಧೀನದ ಬಗ್ಗೆ ಜನತೆಗೆ ಸುಳ್ಳು ಹೇಳಿರುವ ಅಂಶ ಬಯಲಾಗಿದೆ.

Govt any Clearance Not take From Defence Ministry for steel flyover construction

ಬೆಂಗಳೂರಿನಲ್ಲಿ ನಿರ್ಮಿಸಲುದ್ದೇಶಿಸಿರುವ ಸ್ಟೀಲ್​ಫ್ಲೈಓವರ್​ ಬಗ್ಗೆ ಸರ್ಕಾರ ಹಲವು ಸುಳ್ಳುಗಳನ್ನು ಹೇಳಿ ಎಲ್ಲರನ್ನೂ ನಂಬಿಸಲು ಹೊರಟಿದೆ. ಹೌದು , ಸ್ಟೀಲ್​ಫ್ಲೈಓವರ್​ಗೆ ನಗರದ ಹೆಬ್ಬಾಳದ ಬಳಿ ಇಂಡಿಯನ್ ಏರ್​ಫೊರ್ಸ್​ಗೆ ಸೇರಿದ ಸುಮಾರು 1 ಎಕರೆ ಜಾಗದ ಸ್ವಾಧೀನದ ಬಗ್ಗೆ ಸಚಿವ ಕೆ.ಜೆ.ಜಾರ್ಜ್ ಸುಳ್ಳು ಹೇಳಿರೋದು ಬಹಿರಂಗವಾಗಿದೆ.

ಬೆಂಗಳೂರಿನಲ್ಲಿ ಸ್ಟೀಲ್​ಫ್ಲೈಓವರ್ ನಿರ್ಮಿಸಲು ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸ್ತಿದೆ. ಇದಕ್ಕಾಗಿ ಸರ್ಕಾರ ದೊಡ್ಡದೊಂದು ಸುಳ್ಳು ಹೇಳಿ ಸಿಕ್ಕಿ ಬಿದ್ದಿದೆ. ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ರಾಜ್ಯಸಭೆಯಲ್ಲಿ ಕರ್ನಾಟಕ ಸರ್ಕಾರ ಸ್ಟೀಲ್​​ಫ್ಲೈಓವರ್ ಗಾಗಿ ಅಗತ್ಯ ಜಾಗ ಕೇಳಿತ್ತಾ ಎಂದು ರಕ್ಷಣಾ ಸಚಿವಾಲಯದಿಂದ ಮಾಹಿತಿ ಕೇಳಿದ್ದರು. ರಕ್ಷಣಾ ಸಚಿವಾಲಯ ನೀಡಿದ ಉತ್ತರದಿಂದ ರಾಜ್ಯ ಸರ್ಕಾರ ಸ್ಟೀಲ್​ಫ್ಲೈಓವರ್​ಗೆ ಭೂಸ್ವಾಧೀನದ ಬಗ್ಗೆ ಜನತೆಗೆ ಸುಳ್ಳು ಹೇಳಿರುವ ಅಂಶ ಬಯಲಾಗಿದೆ.

ಅಷ್ಟಕ್ಕೂ ಬಸವೇಶ್ವರ ವೃತ್ತದಿಂದ ಹೆಬ್ಬಾಳವರೆಗೆ ನಿರ್ಮಿಸಲಾಗುವ ಸ್ಟೀಲ್​ಫ್ಲೈಓವರ್​ಗೆ ಇಂಡಿಯನ್ ಏರ್​ಫೋರ್ಸ್​ಗೆ ಸೇರಿದ ಸುಮಾರು 1 ಎಕರೆ ಜಾಗದ ಅಗತ್ಯ ಇದೆ. ಆದ್ರೆ ಸರ್ಕಾರ ಭೂಸ್ವಾಧೀನದ ಬಗ್ಗೆ ಇಂಡಿಯನ್ ಏರ್​ಫೋರ್ಸ್​ ಜೊತೆ ಮಾತುಕತೆಯನ್ನೇ ನಡೆಸಿಲ್ಲ ಅನ್ನೋ ಅಂಶ ಬಯಲಾಗಿದೆ. ಅಷ್ಟೇ ಅಲ್ಲ ಸ್ಟೀಲ್​ಪ್ಲೈಓವರ್​ ಗೆ ತನ್ನ ಜಾಗ ಕೊಡೋದಿಲ್ಲ ಅಂತ ಇಂಡಿಯನ್ ಏರ್​ಫೋರ್ಸ್​ ಸ್ಪಷ್ಟಪಡಿಸಿದೆ.

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಭೂಸ್ವಾಧೀನದ ಬಗ್ಗೆ ಇಂಡಿಯನ್ ಏರ್​ಫೋರ್ಸ್​ ಜೊತೆ ಎರಡು ಸುತ್ತಿನ ಮಾತುಕತೆ ನಡೆಸಲಾಗಿದೆ ಅಂದಿದ್ದರು. ಆದರೆ ಈ ಮಾತುಕತೆ ನಡೆದೇ ಇಲ್ಲ ಎಂದು ಸಂಸತ್​ನಲ್ಲಿ ರಕ್ಷಣಾ ಸಚಿವಾಲಯ ಮಾಹಿತಿ ಕೊಟ್ಟಿದೆ.  ಸರ್ಕಾರ ಸುಳ್ಳಿನ ಕೋಟೆ ಕಟ್ಟಿ ದುಬಾರಿ ವೆಚ್ಚದಲ್ಲಿ ಎಲ್ಲರನ್ನೂ ನಂಬಿಸಿ ಸ್ಟೀಲ್​ಫ್ಲೈಓವರ್​ ಕಟ್ಟಲು ಮುಂದಾಗ್ತಿದೆ ಅನ್ನೋದು ಇದರಿಂದ ಸಾಬೀತಾಗಿದೆ.

ವರದಿ: ಮಸೂದ್ ದೊಡ್ಡೇಬಾಗಿಲು, ಸುವರ್ಣನ್ಯೂಸ್

Follow Us:
Download App:
  • android
  • ios