ಶಶಿಕಲಾ ಸಹ ಇಂದು ರಾತ್ರಿ 7.30 ಗಂಟೆಗೆ ರಾಜ್ಯಪಾಲರನ್ನು ಭೇಟಿ ಮಾಡಲಿದ್ದು, ತಮಗೆ ಹೆಚ್ಚು ಶಾಸಕರ ಬೆಂಬಲವಿರುವ ಕಾರಣ ಸರ್ಕಾರ ರಚಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿಕೊಳ್ಳಲಿದ್ದಾರೆ. ಈ ಬೆಳವಣಿಗೆಗಳ ನಂತರ ಸರ್ಕಾರ ರಚನೆಯ ಕಸರತ್ತು ಆರಂಭವಾಗುವ ಸಂಭವವಿದೆ.

ಚೆನ್ನೈ(ಫೆ.09): ತಮಿಳುನಾಡಿನಲ್ಲಿ ಹಲವು ಮಹತ್ವದ ರಾಜಕೀಯ ಬೆಳವಣಿಗೆಗಳು ಉಂಟಾಗುತ್ತಿರುವ ಕಾರಣದಿಂದ ರಾಜ್ಯಪಾಲರಾದ ಸಿ. ವಿದ್ಯಾಸಾಗರ್ ರಾವ್ ಚನ್ನೈ'ಗೆ ಆಗಮಿಸಿದ್ದಾರೆ.ಎಐಡಿಎಂಕೆ ಪಕ್ಷದ ಶಾಸಕಾಂಗ ಪಕ್ಷದ ನಾಯಕಿಯಾಗಿರುವ ವಿ.ಕೆ. ಶಶಿಕಲಾಗಿಂತ ಮನ್ನವೇ ಮಾಜಿ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ತಮ್ಮ ಬೆಂಬಲದ 8 ಮಂದಿ ಶಾಸಕರೊಂದಿಗೆ ಸಂಜೆ 5 ಗಂಟೆಗೆ ರಾಜ್ಯಪಾಲರನ್ನು ಭೇಟಿ ಮಾಡಿದ್ದು,ರಾಜ್ಯದ ರಾಜಕೀಯ ಕಾರಣಗಳು ಹಾಗೂ ರಾಜೀನಾಮೆಗೆ ಕಾರಣವಾದ ವಿಷಯಗಳನ್ನು ಮಾಹಿತಿ ನೀಡಿರುವುದರ ಜೊತೆಗೆ ಸರ್ಕಾರ ರಚಿಸಲು ಸಾಂವಿಧಾನಿಕವಾಗಿ ತಮಗೆ ಅವಕಾಶ ನೀಡಬೇಕು ಕೋರಿಕೊಂಡಿದ್ದಾರೆ ಎನ್ನಲಾಗಿದೆ.

ಶಶಿಕಲಾ ಸಹ ಇಂದು ರಾತ್ರಿ 7.30 ಗಂಟೆಗೆ ರಾಜ್ಯಪಾಲರನ್ನು ಭೇಟಿ ಮಾಡಲಿದ್ದು, ತಮಗೆ ಹೆಚ್ಚು ಶಾಸಕರ ಬೆಂಬಲವಿರುವ ಕಾರಣ ಸರ್ಕಾರ ರಚಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿಕೊಳ್ಳಲಿದ್ದಾರೆ. ಈ ಬೆಳವಣಿಗೆಗಳ ನಂತರ ಸರ್ಕಾರ ರಚನೆಯ ಕಸರತ್ತು ಆರಂಭವಾಗುವ ಸಂಭವವಿದೆ.

ಸಿಎಂ ಸ್ಥಾನಕ್ಕೆ ಓ. ಪನ್ನೀರ್ ಸೆಲ್ವಂ ರಾಜೀನಾಮೆ ನೀಡಿದ ನಂತರ ಶಶಿಕಲಾ ಎಐಡಿಎಂಕೆ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿದ್ದರು. ಆದರೆ ಪನ್ನೀರ್ ಅವರ ಬಹಿರಂಗ ಬಂಡಾಯ ಹಾಗೂ ರಾಜ್ಯಪಾಲರು ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಮುಂದೂಡಿದ ಕಾರಣ ಪ್ರಮಾಣವಚನ ಸ್ವೀಕಾರ ಸಮಾರಂಭ ಮುಂದೂಡಿಕೆಯಾಗಿತ್ತು.