ಮಕ್ಕಳನ್ನು ಆತ್ಮಹತ್ಯೆಗೆ ಪ್ರೇರೆಪಿಸುವ ಬ್ಲೂ ವೇಲ್ ಆಟದ ಕೊಂಡಿಗಳನ್ನು ತೆಗೆದುಹಾಕುವಂತೆ ಸರ್ಕಾರವು ಗೂಗಲ್, ಫೇಸ್ಬುಕ್, ಮೈಕ್ರೋಸಾಫ್ಟ್ ಮತ್ತಿತರ ಕಂಪನಿಗಳಿಗೆ ಸೂಚಿಸಿದೆ. ಬ್ಲೂ ವೇಲ್ ಚ್ಯಾಲೆಂಜ್ ಆಟದಿಂದ ಮಕ್ಕಳು ಆತ್ಪಹತ್ಯೆ ಮಾಡಿಕೊಂಡಿರುವ ಪ್ರಕರಣ ಭಾರತದಲ್ಲಿ ವರದಿಯಾಗುತ್ತಿದೆ. ಈ ಅಪಾಯಕಾರಿ ಆಟ ಹಾಗೂ ಇದನ್ನು ಹೋಲುವ ಇನ್ನಿತರ ಆಟಗಳ ಕೊಂಡಿಯನ್ನು ತೆಗೆದುಹಾಕುವಂತೆ ಮನವಿಮಾಡಿಕೊಳ್ಳುತ್ತೇವೆ, ಎಂದು ಕೇಂದ್ರ ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮೈಕ್ರೋಸಾಫ್ಟ್, ಗೂಗಲ್ ಫೇಸ್ಬುಕ್ ಕಂಪನಿಗಳಿಗೆ ಪತ್ರ ಬರೆದಿದೆ.

ನವದೆಹಲಿ: ಮಕ್ಕಳನ್ನು ಆತ್ಮಹತ್ಯೆಗೆ ಪ್ರೇರೆಪಿಸುವ ಬ್ಲೂ ವೇಲ್ ಆಟದ ಕೊಂಡಿಗಳನ್ನು ತೆಗೆದುಹಾಕುವಂತೆ ಸರ್ಕಾರವು ಗೂಗಲ್, ಫೇಸ್ಬುಕ್, ಮೈಕ್ರೋಸಾಫ್ಟ್ ಮತ್ತಿತರ ಕಂಪನಿಗಳಿಗೆ ಸೂಚಿಸಿದೆ.

ಬ್ಲೂ ವೇಲ್ ಚ್ಯಾಲೆಂಜ್ ಆಟದಿಂದ ಮಕ್ಕಳು ಆತ್ಪಹತ್ಯೆ ಮಾಡಿಕೊಂಡಿರುವ ಪ್ರಕರಣ ಭಾರತದಲ್ಲಿ ವರದಿಯಾಗುತ್ತಿದೆ. ಈ ಅಪಾಯಕಾರಿ ಆಟ ಹಾಗೂ ಇದನ್ನು ಹೋಲುವ ಇನ್ನಿತರ ಆಟಗಳ ಕೊಂಡಿಯನ್ನು ತೆಗೆದುಹಾಕುವಂತೆ ಮನವಿಮಾಡಿಕೊಳ್ಳುತ್ತೇವೆ, ಎಂದು ಕೇಂದ್ರ ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮೈಕ್ರೋಸಾಫ್ಟ್, ಗೂಗಲ್ ಫೇಸ್ಬುಕ್ ಕಂಪನಿಗಳಿಗೆ ಪತ್ರ ಬರೆದಿದೆ.

ಇಂಟರ್ನೆಟ್ನಲ್ಲಿ ಲಭ್ಯವಿರುವ ಈ ಆಟದಲ್ಲಿ ಭಾಗವಹಿಸುವವರಿಗೆ 50 ದಿನಗಳಲ್ಲಿ ಮಾಡಿ ಮುಗಿಸುವಂತಹ ಕೆಲವು ಗುರಿಗಳನ್ನು ನೀಡಲಾಗುತ್ತದೆ. ಕೊನೆಯ ಗುರಿಯು ಆಟಗಾರನನ್ನು ಆತ್ಮಹತ್ಯೆವರೆಗೂ ಕೊಂಡೊಯ್ಯುತ್ತದೆ. ಸವಾಲನ್ನು ಸಮರ್ಥವಾಗಿ ಪೂರ್ಣಗೊಳಿಸಿದವರು ಅದರ ಫೋಟೋವನ್ನು ಕೂಡಾ ಹಂಚಿಕೊಳ್ಳಬೇಕು.

ಬ್ಲೂವೇಲ್ ಆಟದ ನಿರ್ವಾಹಕರು ಸೊಶಿಯಲ್ ಮೀಡಿಯಾ ಮೂಲಕ ಮಕ್ಕಳನ್ನು ಆಟವಾಡುವಂತೆ ಪ್ರಚೋದಿಸುತ್ತಾರೆ. ಮಕ್ಕಳು ಆ ಮೂಲಕ ಅಪಾಯಕಾರಿ ಆಟಕ್ಕೆ ಬಲಿಯಾಗುತ್ತಿದ್ದಾರೆ ಎಂದು ಇಲಾಖೆ ಹೇಳಿದೆ.

ಮುಂಬೈ ಹಾಗೂ ಪಶ್ಚಿಮ ಮಿಡ್ನಾಪುರ ಜಿಲ್ಲೆಗಳಲ್ಲಿ ಮಕ್ಕಳು ಈ ಆಟಕ್ಕೆ ಬಲಿಯಾಗಿರುವುದು ವರದಿಯಾಗಿದೆ.

ಈ ಆಟವನ್ನು ಪ್ರಚುರಪಡಿಸುವವರ ಬಗ್ಗೆ ಕಾನೂನು ಸಂಸ್ಥೆಗಳಿಗೆ ವರದಿ ಮಾಡುವಂತೆ ಸೂಚಿಸಲಾಗಿದೆ.