ನವದೆಹಲಿ[ಡಿ.07]: ಒಂದು ರುಪಾಯಿಗೆ ಈ ಕಾಲದಲ್ಲಿ ಏನು ಬರುತ್ತೆ ಎಂದು ಪ್ರಶ್ನೆ ಮಾಡುವವರಿದ್ದಾರೆ. ಆದರೆ ರುಪಾಯಿ ನಾಣ್ಯಗಳಲ್ಲೇ ಒಂದು ರು. ದುಬಾರಿ ಎಂದು ಸರ್ಕಾರ ನೀಡಿರುವ ಮಾಹಿತಿ ಹೇಳುತ್ತದೆ.

1 ರು. ನಾಣ್ಯ ಟಂಕಿಸಲು ಸರ್ಕಾರ 1.11 ರು. ವೆಚ್ಚ ಮಾಡುತ್ತಿದೆ ಎಂದು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ)ಯಡಿ ಕೇಳಲಾದ ಪ್ರಶ್ನೆಗೆ ಉತ್ತರ ಲಭಿಸಿದೆ. ಸದ್ಯ ರಿಸರ್ವ್‌ ಬ್ಯಾಂಕ್‌ 1, 2, 5, 10 ರು. ನಾಣ್ಯಗಳನ್ನು ಟಂಕಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.

2 ರು. ನಾಣ್ಯಕ್ಕೆ 1.28 ರೂಪಾಯಿ

5 ರು ನಾಣ್ಯಕ್ಕೆ 3.69 ರೂಪಾಯಿ

10 ರು. ನಾಣ್ಯಕ್ಕೆ 5.54 ರುಪಾಯಿ

ಹೀಗೆ ಸರ್ಕಾರ ನಾಣ್ಯ ಟಂಕಿಸಲು ವೆಚ್ಚ ಮಾಡುತ್ತಿದೆ. ಈ ಕುರಿತಂತೆ ಹೈದರಾಬಾದ್‌ನ ಟಂಕಸಾಲೆ ಅಧಿಕೃತ ಮಾಹಿತಿಯನ್ನು ನೀಡಿದೆ.