ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ‘ಸ್ಮಾರ್ಟ್ ಸಿಟಿ’ ಸಾಕಾರಕ್ಕಾಗಿ ಎಲ್ಲ ರಾಜ್ಯಗಳಿಗೆ ಕೇಂದ್ರ ಸರ್ಕಾರ ಒಟ್ಟು 9940 ಕೋಟಿ ರು. ಬಿಡುಗಡೆ ಮಾಡಿದೆ. 1378 ಕೋಟಿ ರು. ಅನುದಾನ ಪಡೆಯುವ ಮೂಲಕ ಮಹಾರಾಷ್ಟ್ರ ಅತಿಹೆಚ್ಚು ರು. ಅನುದಾನ ಪಡೆದ ರಾಜ್ಯವಾಗಿದೆ.

984 ಕೋಟಿ ರು. ಪಡೆದ ಮಧ್ಯಪ್ರದೇಶ 2ನೇ ಸ್ಥಾನದಲ್ಲಿದೆ. ಇನ್ನು, ಸ್ಮಾರ್ಟ್ ಸಿಟಿ ಯೋಜನೆಯಡಿ 836 ಕೋಟಿ ರು. ಪಡೆದಿರುವ ಕರ್ನಾಟಕ 4ನೇ ಸ್ಥಾನದಲ್ಲಿದೆ. 3ನೇ ಸ್ಥಾನವನ್ನು ತಮಿಳುನಾಡು ಅಲಂಕರಿಸಿದೆ. 99 ನಗರಗಳ ಅಭಿವೃದ್ಧಿಗಾಗಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಒಟ್ಟು 2.03 ಲಕ್ಷ ಕೋಟಿ ರು. ಹೂಡಿಕೆಗೆ ಪ್ರಸ್ತಾಪಿಸಲಾಗಿದೆ.