ಡಿಜಿಟಲ್ ಟ್ರಾನ್ಸಾಕ್ಷನ್ ಸಮಾನಾಂತರ ವ್ಯವಸ್ಥೆ. ಬದಲೀ ವ್ಯವಸ್ಥೆಯಲ್ಲ.  ಯಾವುದೇ ಆರ್ಥಿಕತೆ ನಗದು ರಹಿತವಾಗಿರಲು ಸಾಧ್ಯವಿಲ್ಲ. ಇದು ಕ್ಯಾಶ್ ಲೆಸ್ ಎಕಾನಮಿ ಅಲ್ಲ. ಲೆಸ್ ಕ್ಯಾಶ್ ಎಕಾನಮಿ ಎಂದು ಜೇಟ್ಲಿ ಹೇಳಿದ್ದಾರೆ.

ನವದೆಹಲಿ (ಡಿ.15): ನಗದು ರಹಿತ ಆರ್ಥಿಕತೆಯನ್ನು ತರುವ ಉದ್ದೇಶದಿಂದ ಸರ್ಕಾರ ಹಾಗೂ ಆರ್ ಬಿಐ ಡಿಜಿಟಲ್ ವ್ಯವಹಾರವನ್ನು ಅಭಿವೃದ್ದಿಪಡಿಸಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಡಿಜಿಟಲ್ ಟ್ರಾನ್ಸಾಕ್ಷನ್ ಸಮಾನಾಂತರ ವ್ಯವಸ್ಥೆ. ಬದಲೀ ವ್ಯವಸ್ಥೆಯಲ್ಲ. ಯಾವುದೇ ಆರ್ಥಿಕತೆ ನಗದು ರಹಿತವಾಗಿರಲು ಸಾಧ್ಯವಿಲ್ಲ. ಇದು ಕ್ಯಾಶ್ ಲೆಸ್ ಎಕಾನಮಿ ಅಲ್ಲ. ಲೆಸ್ ಕ್ಯಾಶ್ ಎಕಾನಮಿ ಎಂದು ಜೇಟ್ಲಿ ಹೇಳಿದ್ದಾರೆ.

ಆರ್ಥಿಕತೆಯಲ್ಲಿ ಹೆಚ್ಚಾಗಿರುವ ಹಣ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮವನ್ನು ಬೀರುತ್ತಿದೆ. ಹಾಗಾಗಿ ಸರ್ಕಾರ ಡಿಜಿಟಲ್ ವ್ಯವಹಾರಗಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ ಎಂದಿದ್ದಾರೆ.