Asianet Suvarna News Asianet Suvarna News

ನ್ಯೂಯಾರ್ಕ್ ಟೈಮ್ಸ್'ಗೆ ಭಾರತ ತಿರುಗೇಟು

ಹಿಂದುತ್ವದ ಪ್ರಖರ ಹರಿಕಾರ ಯೋಗಿ ಆದಿತ್ಯನಾಥ್‌'ರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಧಾನಿ ನರೇಂದ್ರ ಮೋದಿ ಆಯ್ಕೆ ಮಾಡಿದ್ದಾರೆ. ಇದು ನಿಜವಾಗಿಯೂ ಧಾರ್ಮಿಕ ಅಲ್ಪಸಂಖ್ಯಾತರಿಗೆ ‘ಆಘಾತಕಾರಿ’ ಬೆಳವಣಿಗೆಯಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ತನ್ನ ಸಂಪಾದಕೀಯದಲ್ಲಿ ಅಭಿಪ್ರಾಯಪಟ್ಟಿತ್ತು.

Government Questions New York Times Editorial On Yogi Adityanath

ನವದೆಹಲಿ(ಮಾ.24): ಉತ್ತರ ಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ಯೋಗಿ ಆದಿತ್ಯನಾಥ್‌'ರನ್ನು ಆಯ್ಕೆ ಮಾಡಿದ ಪ್ರಧಾನಿ ಮೋದಿ ನಿರ್ಧಾರ ಪ್ರಶ್ನಾರ್ಥಕ ಎಂಬ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯ ಟೀಕೆಗೆ ಭಾರತ ಸರ್ಕಾರ ತೀಕ್ಷ್ಣ ತಿರುಗೇಟು ನೀಡಿದೆ.

‘ಎಲ್ಲ ಸಂಪಾದಕೀಯಗಳು ಅಥವಾ ಅಭಿಪ್ರಾಯಗಳು ವಸ್ತುನಿಷ್ಠವಾಗಿರಬೇಕು. ಯಾವುದೇ ದೇಶದ ಪ್ರಾಮಾಣಿಕ ಪ್ರಜಾಪ್ರಭುತ್ವದ ತೀರ್ಪಿನ ಕುರಿತು ಅನುಮಾನ ವ್ಯಕ್ತಪಡಿಸುವ ಬುದ್ಧಿವಂತಿಕೆಯೂ ಪ್ರಶ್ನಾರ್ಥಕವಾಗಿದೆ,’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಗೋಪಾಲ್ ಬಾಗ್ಲೇ ಹೇಳಿದ್ದಾರೆ.

ಹಿಂದುತ್ವದ ಪ್ರಖರ ಹರಿಕಾರ ಯೋಗಿ ಆದಿತ್ಯನಾಥ್‌'ರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಧಾನಿ ನರೇಂದ್ರ ಮೋದಿ ಆಯ್ಕೆ ಮಾಡಿದ್ದಾರೆ. ಇದು ನಿಜವಾಗಿಯೂ ಧಾರ್ಮಿಕ ಅಲ್ಪಸಂಖ್ಯಾತರಿಗೆ ‘ಆಘಾತಕಾರಿ’ ಬೆಳವಣಿಗೆಯಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ತನ್ನ ಸಂಪಾದಕೀಯದಲ್ಲಿ ಅಭಿಪ್ರಾಯಪಟ್ಟಿತ್ತು.

Latest Videos
Follow Us:
Download App:
  • android
  • ios