ಬೆಂಗಳೂರು[ಆ. 31]  ಮದ್ಯ ಖರೀದಿಗೆ ಇನ್ನು ಮುಂದೆ ಆಧಾರ್ ಕಾರ್ಡ್ ನೀಡಬೇಕಾಗುತ್ತದೆ. ಯಾರು ಎಷ್ಟು ಎಣ್ಣೆ ಕುಡಿಯುತ್ತಾರೆ ಎಂಬ ಲೆಕ್ಕಕ್ಕೆ ಇದಲ್ಲ.. ಇದರ ಹಿಂದಿರುವ ಉದ್ದೇಶ ಪರಿಸರ ಕಾಪಾಡುವಿಕೆ.

ಟೆಟ್ರಾ ಪ್ಯಾಕ್ ಗಳನ್ನು ಕಂಡಲ್ಲಿ ಬಿಸಾಡುತ್ತಾರೆ ಅದನ್ನು ತಡೆಯಲು ಆಧಾರ್ ಕಾರ್ಡ್ ಕಡ್ಡಾಯ ಮಾಡಬೇಕು ಎಂಬ ಪ್ರಸ್ತಾವನೆ ಸರಕಾರದ ಮುಂದೆ ಬಂದಿದೆ. ಟೆಟ್ರಾ ಪ್ಯಾಕ್ ಮತ್ತು ಬಾಟಲಿಗಳಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯ ತಡೆಯಲು ಮದ್ಯ ಖರೀದಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸುವ ವಿಚಾರದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಗ್ರ ವರದಿ ನೀಡುವಂತೆ ರಾಜ್ಯ ಸರ್ಕಾರ ಅಬಕಾರಿ ಇಲಾಖೆಗೆ ಸೂಚನೆ ನೀಡಿದೆ.

ಮದ್ಯದ ಬಾಟಲ್​ಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಿರುವುದರಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಿಂದಿನ ಬಾರಿ ತೆಗೆದುಕೊಂಡು ಹೋದ ಮದ್ಯದ ಬಾಟಲಿಯನ್ನು ವಾಪಸ್​ ತಂದು ಕೊಟ್ಟವರಿಗೆ ಮಾತ್ರ ಮದ್ಯ ನೀಡುವುದು. ಇದಕ್ಕಾಗಿ ಮದ್ಯ ಖರೀದಿಸುವವರ ಆಧಾರ್​ ಕಾರ್ಡ್​ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂಬುದು ಮೂಲ ಉದ್ದೇಶ. ಪ್ರಾಯೋಗಿಕವಾಗಿ ಮಂಡ್ಯ ಜಿಲ್ಲೆ ಮಳವಳ್ಳಿ ವಲಯದಲ್ಲಿ ಜಾರಿಗೆ ತರಲು ಚಿಂತಿಸಲಾಗಿದೆ ಎಂಬ ಸುದ್ದಿಯೂ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು ಮಳವಳ್ಳಿ ವಲಯ ಅಬಕಾರಿ ನಿರೀಕ್ಷಕರು ಬರೆದಿರುವ ಪತ್ರವನ್ನೂ ವೈರಲ್​ ಮಾಡಲಾಗಿದೆ.

ಮದ್ಯಪ್ರಿಯರಿಗೆ ಗೋವಾದಿಂದ ಶುಭ ಸುದ್ದಿ... ಹೆಚ್ಚಿಗೆ ತರಬಹುದು

ಎನ್‌ಜಿಒ ಮಂಗಳೂರಿನ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಸಲ್ಲಿಸಿರುವ ಮನವಿಯಲ್ಲಿ ಪರಿಸರ ಸಮತೋಲನದ ಮತ್ತು ಮಾಲಿನ್ಯ ತಡೆಗಟ್ಟುವಿಕೆ ವಿಚಾರವನ್ನು ಪ್ರಮುಖವಾಗಿ ಹೇಳಿದೆ. 

ಸಂಸ್ಥೆಯೊಂದು ಅಬಕಾರಿ ಇಲಾಖೆಗೆ ಪತ್ರ ಬರೆದು ಆಧಾರ್ ಮಾಹಿತಿ ದಾಖಲಿಸಿಕೊಂಡ ಬಳಿಕವೇ ಮದ್ಯ ನೀಡಬೇಕು. ಎರಡನೇ ಬಾರಿ ಮದ್ಯ ಖರೀದಿಸಲು ಬಂದಾಗ ಹಳೆಯ ಬಾಟಲ್ ಅಂಗಡಿಗೆ ನೀಡಲೆಬೇಕು ಎಂಬ ನಿಬಂಧನೆಯನ್ನು ಹಾಕಲಾಗಿದೆ. ಹರಿಯಾಣದಲ್ಲಿ ಈಗಾಗಲೇ ಮದ್ಯ ಖರೀದಿಗೆ ಆಧಾರ್ ಕಡ್ಡಾಯ ಮಾಡಲಾಗಿದೆ. ಸಂಸ್ಥೆ ಮಾಡಿದ ಕೆಲವು ಮನವಿಗಳು ವಿಚಿತ್ರವಾಗಿದೆ.. ಭಾರೀ ಮಜವಾಗಿದೆ..ಕೆಲವೊಂದು ನಿಮಗೆ ಹಾಸ್ಯಾಸ್ಪದ ಎನಿಸಿದರೆ ನಾವೇನು ಮಾಡಕಾಗಲ್ಲ..

ಕರ್ನಾಟಕಕ್ಕೆ ಹೊಸ ಸಿಎಂ, ಮೋದಿಗೆ ಸ್ವಾಮಿ ಶಾಕ್; ಇಲ್ಲಿವೆ ಆ.31ರ ಟಾಪ್ 10 ಸುದ್ದಿ!

ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಮನವಿಗಳೇನು?

1.  ಮದ್ಯದ ಅಂಗಡಿಯವರು ಗ್ರಾಹಕನ ಆಧಾರ್ ಪಡೆದು ಮದ್ಯವನ್ನು ನೀಡಬೇಕು
2. ಒಮ್ಮೆ ಮದ್ಯ ಖರೀದಿಸಿದ ವ್ಯಕ್ತಿ ಮತ್ತೆ ಮದ್ಯ ಖರೀದಿಸಲು ಬಂದಾಗ ಹಳೆಯ ಬಾಟಲಿ, ಟೆಟ್ರಾಪ್ಯಾಕ್ ವಾಪಸ್ ನೀಡುವುದು ಕಡ್ಡಾಯ
3. ಎಲ್ಲೆಂದೆರಲ್ಲೆ ಟೆಟ್ರಾಪ್ಯಾಕ್ , ಬಾಟಲಿಗಳು ಬಿದ್ದಿದ್ದರೆ ಅವುಗಳ ಬಾರ್ ಕೋಡ್ ಸ್ಕ್ಯಾನ್ ಮಾಡಿ ಮದ್ಯ ಮಾರಿದ ಅಂಗಡಿಯ ಪರವಾನಗಿ ರದ್ದುಪಡಿಸಲಾಗುವುದು
4. ಕುಡುಕರ ಪತ್ನಿ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿಗಾಗಿ ಹಣ (ಸೆಸ್)ಸಂಗ್ರಹಿಸಬೇಕು
5.  ಮದ್ಯ ಸೇವಿಸಿ ಎಲ್ಲೆಂದರಲ್ಲಿ ಬೀಳುವವರನ್ನ ಅಬಕಾರಿ ಇಲಾಖೆ ವಾಹನದಲ್ಲಿ ಸುರಕ್ಷಿತವಾಗಿ ಅವರ ಮನೆಗೆ ತಲುಪಿಸುವ ಜವಾಬ್ದಾರಿ ಪಡೆದುಕೊಳ್ಳಬೇಕು
5.  ದುಡಿದ ಹಣ ಮದ್ಯಕ್ಕೆ ಖರ್ಚು ಮಾಡಿದರೆ ಅವರ ಕುಟುಂಬಕ್ಕೆ ಅಗತ್ಯ ದಿನಸಿ, ಇತರೆ ಸಾಮಾಗ್ರಿಗಳನ್ನು ಇಲಾಖೆ ಉಚಿತವಾಗಿ ಪೂರೈಸಬೇಕು
6. ಕುಡುಕರ ಆರೋಗ್ಯ ಹಾಳಾದರೆ ಅವರ ಆರೋಗ್ಯ ತಪಾಸಣೆ, ಚಿಕಿತ್ಸಾ ವೆಚ್ಚವನ್ನು ಇಲಾಖೆ ಅಥವಾ ಸರ್ಕಾರವೇ ಭರಿಸಬೇಕು