ಬರೋಬ್ಬರಿ 19 ಸಾವಿರ ಮಂದಿಗೆ ಮನೆ ನೀಡಲು ಹಾಗೂ ಸಾಲ ಮರು ಪಾವತಿಸಲು ವಿಫಲವಾಗಿರುವ ದೇಶದ ಪ್ರಸಿದ್ಧ ರಿಯಲ್ ಎಸ್ಟೇಟ್ ಕಂಪನಿ ಯುನಿಟೆಕ್ ಅನ್ನು ವಶಕ್ಕೆ ಪಡೆಯಲು ಸರ್ಕಾರಕ್ಕೆ `ದಿವಾಳಿ ನ್ಯಾಯಾಲಯ' ಅನುಮತಿ ನೀಡಿದೆ.
ನವದೆಹಲಿ(ಡಿ.9): ಬರೋಬ್ಬರಿ 19 ಸಾವಿರ ಮಂದಿಗೆ ಮನೆ ನೀಡಲು ಹಾಗೂ ಸಾಲ ಮರು ಪಾವತಿಸಲು ವಿಫಲವಾಗಿರುವ ದೇಶದ ಪ್ರಸಿದ್ಧ ರಿಯಲ್ ಎಸ್ಟೇಟ್ ಕಂಪನಿ ಯುನಿಟೆಕ್ ಅನ್ನು ವಶಕ್ಕೆ ಪಡೆಯಲು ಸರ್ಕಾರಕ್ಕೆ `ದಿವಾಳಿ ನ್ಯಾಯಾಲಯ' ಅನುಮತಿ ನೀಡಿದೆ. ಸಂಕಷ್ಟಕ್ಕೆ ಸಿಲುಕಿರುವ ಕಂಪನಿಯೊಂದನ್ನು ಸರ್ಕಾರ ವಶಕ್ಕೆ ಪಡೆಯುವ ಬೆಳವಣಿಗೆ ಅತ್ಯಂತ ಅಪರೂಪದ್ದು. ಈ ಹಿಂದೆ ಸತ್ಯಂ ಕಂಪ್ಯೂಟರ್ಸ್ ಕಂಪನಿಯನ್ನು ಸರ್ಕಾರ ಇದೇ ರೀತಿ ತನ್ನ ತೆಕ್ಕೆಗೆ ತೆಗೆದುಕೊಂಡ ನಿದರ್ಶನವಿದೆ.
ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣ, ಒಂದು ಕಾಲದಲ್ಲಿ ದೇಶದ ನಂ.2 ರಿಯಲ್ ಎಸ್ಟೇಟ್ ಕಂಪನಿಯಾಗಿದ್ದ ಯುನಿಟೆಕ್ ವಶಕ್ಕೆ ಪಡೆಯಲು ಸರ್ಕಾರಕ್ಕೆ ಅನುಮತಿ ನೀಡಿತು. ಸರ್ಕಾರ 10 ಮಂದಿ ನಾಮನಿರ್ದೇಶಿತ ನಿರ್ದೇಶಕರನ್ನು ಕಂಪನಿಗೆ ನೇಮಕ ಮಾಡಬಹುದು ಎಂದು ಹೇಳಿತು.
ಈಗಾಗಲೇ ಪದಚ್ಯುತಗೊಂಡಿರುವ ಯುನಿಟೆಕ್ ಕಂಪನಿಯ ನಿರ್ದೇಶಕರಿಗೆ ಈ ಸಂಬಂಧ ನ್ಯಾಯಾಧಿಕರಣ ನೋಟಿಸ್ ಕೂಡ ಜಾರಿ ಮಾಡಿತು.
