ರಾಷ್ಟ್ರೀಯ ಹೆದ್ದಾರಿಯಲ್ಲಿ 50 ಅಡಿ ಆಳದ ಕಂದಕವೊಂದು ಬಿದ್ದು ಕಾರೊಂದು ಕಂದಕದಲ್ಲಿ ಸಿಲುಕಿದ ಘಟನೆ ನಡೆದಿದೆ. ಆಗ್ರಾ ಹಾಗೂ ಲಕ್ನೋ ಹೆದ್ದಾರಿಯಲ್ಲಿ ಈ ಕಂದಕ ಬಿದ್ದಿದೆ. 

ಲಖನೌ: ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ, ಆಗ್ರಾ-ಲಖನೌ ಎಕ್ಸ್ ಪ್ರೆಸ್‌ವೇ ಹೆದ್ದಾರಿ ಬದಿಯ ಸರ್ವಿಸ್ ರಸ್ತೆ ಕುಸಿದಿದೆ.

ರಸ್ತೆ ಕುಸಿದ ಹಿನ್ನೆಲೆಯಲ್ಲಿ ಇಲ್ಲಿ ಸೃಷ್ಟಿಯಾದ 50 ಅಡಿ ಕಂದಕಕ್ಕೆ ವಾಹನವೊಂದು ಉರುಳಿಬಿದ್ದ ಘಟನೆ ನಡೆದಿದೆ. 

ವಾಹನ ದಲ್ಲಿ ನಾಲ್ವರಿದ್ದು ಯಾರಿಗೂ ಗಾಯಗಳಾಗಿಲ್ಲ. ಸರ್ವಿಸ್ ರಸ್ತೆಯಲ್ಲಿ ಕಂದಕ ಸೃಷ್ಟಿಯಾ ಗಿರುವ ಕಳಪೆ ಕಾಮಗಾರಿಗೆ ಸಂಬಂಧಿಸಿ ತನಿಖೆಗೆ ಸರ್ಕಾರ ಆದೇಶಿಸಿದೆ.