ಬೆಂಗಳುರು (ಸೆ.21): ಪತ್ರಿಕೋದ್ಯಮ, ಸಾಹಿತ್ಯ, ರಂಗಭೂಮಿ ಮತ್ತು ಸಿನಿಮಾ ರಂಗದ ಬಹು ದಶಕಗಳ ಸಾಂಗತ್ಯ ಹೊಂದಿದ್ದ ಗೋಪಾಲ ವಾಜಪೇಯಿ ಅವರು ಕೊನೆಯುಸಿರೆಳೆದಿದ್ದಾರೆ.

ವಯಸ್ಸು ಅರವತ್ತಾರಾಗಿದ್ದರೂ ಸದಾ ಯುವಕನಂತೆ ಚುರುಕಾಗಿದ್ದ ವಾಜಪೇಯಿ ಅವರು ಅಸ್ತಮಾ ಕಾಯಿಲೆಯಿಂದ ಕಳೆದ ಎರಡು ವರ್ಷಗಳಿಂದ ಬಳಲುತ್ತಿದ್ದರು.

ಈ ಮದ್ಯೆ ಸ೦ತೆಯಲ್ಲಿ ನಿ೦ತ ಕಬೀರ ಚಿತ್ರಕ್ಕೆ ಹಾಡುಗಳನ್ನು ಬರೆದು ಸೈ ಎನಿಸಿಕೊ೦ಡೊದ್ದರು. ಅನಾರೋಗ್ಯದ ಹಿನ್ನೆಲೆ ಕುಸುಮ ಆಸ್ಪತ್ರೆಗೆ ದಾಖಲಾಗಿದ್ದ ಅವರು ನಿಧನರಾಗಿದ್ದಾರೆ.

ಓದನ್ನು ಅರ್ಧಕ್ಕೇ ಬಿಟ್ಟು ಪತ್ರಿಕೋದ್ಯಮದ ತಿರುಗಣಿಗೆ ಬಿದ್ದ ಅವರು ಸಂಯುಕ್ತ ಕರ್ನಾಟಕ ಸೇರಿದಂತೆ ಅನೇಕ ಪ್ರಸಿದ್ಧ ಪತ್ರಿಕೆಗಳಲ್ಲಿ ದೊಡ್ಡ ಜವಾಬ್ದಾರಿ ನಿಭಾಯಿಸಿ ದೃಶ್ಯ ಮಾಧ್ಯಮಕ್ಕೂ ಅಡಿಯಿರಿಸಿದ್ದ ವಾಜಪೇಯಿಯವರದ್ದು ಚಿತ್ರರಂಗದಲ್ಲಿಯೂ ದೊಡ್ಡ ಹೆಸರು ಮಾಡಿದ್ದರು.

ಸಂತ ಶಿಶುನಾಳ ಷರೀಫ ಚಿತ್ರದ ಮೂಲಕ ಸಂಭಾಷಣಕಾರನಾಗಿ ಚಿತ್ರರಂಗ ಪ್ರವೇಶಿಸಿದ ಅವರು, ಸಂಗ್ಯಾ ಬಾಳ್ಯ ಮುಂತಾದ ಚಿತ್ರಗಳಿಗೆ ಚೆಂದದ ಹಾಡು ಬರೆದ ವಾಜಪೇಯಿಯವರು ನಾಗಮಂಡಲ ಚಿತ್ರದ ಹಾಡುಗಳ ಮೂಲಕ ಇಂದಿಗೂ ಕಾಡುತ್ತಲೇ ಇದ್ದಾರೆ.