ಪೊಲೀಸರು ಈತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಹಣ ಕದ್ದಿರುವುದನ್ನು ಒಪ್ಪಿಕೊಂಡು ತನ್ನ ಗೆಳತಿಯ ಖರ್ಚನ್ನು ನಿಭಾಯಿಸಲು ಈ ಕೃತ್ಯವೆಸಗಿರುವುದಾಗಿ ತಿಳಿಸಿದ್ದಾನೆ.
ನವದೆಹಲಿ[ಅ.11]: ಪ್ರತಿಷ್ಠಿತ ಗೂಗಲ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಟೆಕ್ಕಿಯೊಬ್ಬ ಕಳ್ಳತನ ಮಾಡಿ ಸಿಕ್ಕಿ ಬಿದ್ದ ಘಟನೆ ನವದೆಹಲಿಯಲ್ಲಿ ನಡೆದಿದೆ.
ಇಷ್ಟಕ್ಕೂ ಈತ ಕಳ್ಳತನ ಮಾಡಿದ್ದು ತನ್ನ ಹುಡುಗಿಯ ದಿನನಿತ್ಯದ ಖರ್ಚಿಗೆ ಹಣ ಹೊಂದಿಸುವುದ್ದಕ್ಕಾಗಿ. ಹರ್ಯಾಣದ ಅಂಬಾಲ ಜಿಲ್ಲೆಯ ವಾಸಿಯಾದ ಗರ್ವಿತ್ ಸಹಾನಿ ಬಂಧಿತ ಆರೋಪಿ. ಸಂಸ್ಥೆಯು ಸೆ.11 ರಂದು ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ. ಅದೇ ದಿನ ದಿವ್ಯಾನಿ ಜೈನ್ ಎಂಬ ಉದ್ಯೋಗಿಯೊಬ್ಬರ ಪರ್ಸ್'ನಿಂದ 10 ಸಾವಿರ ರೂ. ಕಳುವಾಗಿತ್ತು. ಈ ಬಗ್ಗೆ ಮಹಿಳೆಯು ಪೊಲೀಸರಿಗೆ ದೂರನ್ನು ನೀಡಿದ್ದರು.
ತನಿಖೆ ಆರಂಭಿಸಿದ ಪೊಲೀಸರು ಸುತ್ತಮುತ್ತಲಿನ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಟೆಕ್ಕಿ ಕಳವು ಮಾಡಿರುವುದು ಗೊತ್ತಾಗಿದೆ. ನಂತರ ಈತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಹಣ ಕದ್ದಿರುವುದನ್ನು ಒಪ್ಪಿಕೊಂಡು ತನ್ನ ಗೆಳತಿಯ ಖರ್ಚನ್ನು ನಿಭಾಯಿಸಲು ಈ ಕೃತ್ಯವೆಸಗಿರುವುದಾಗಿ ತಿಳಿಸಿದ್ದಾನೆ. ಬಂಧಿತನಿಂದ 3 ಸಾವಿರ ರೂ. ವಶಪಡಿಸಿಕೊಂಡಿದ್ದಾರೆ.
