ಗೂಗಲ್‌ಗೆ ಹುಟ್ಟುಹಬ್ಬದ ಸಂಭ್ರಮ | 20 ನೇ ವರ್ಷದ ಸಂಭ್ರಮದಲ್ಲಿದ್ದಾನೆ ಗೂಗಲ್ | ಹುಟ್ಟುಹಬ್ಬದ ಶುಭಾಶಯ ಕೋರಿದ ಗೂಗಲ್ ಡೂಡಲ್ 

ಬೆಂಗಳೂರು (ಸೆ. 27): ನಮಗೆ ಏನೇ ಮಾಹಿತಿ ಬೇಕಾದರೆ ಗೂಗಲ್ ಮಹಾಶಯನ ಬಳಿ ಕೇಳಿದರೆ ಕ್ಷಣ ಮಾತ್ರದಲ್ಲಿ ತೆರೆದಿಡುತ್ತಾನೆ. ಮಾಹಿತಿಗಳ ಮಹಾ ಸಾಗರ ಗೂಗಲ್. ಇಂದು ಗೂಗಲ್ ಗೆ 20 ನೇ ಹುಟ್ಟುಹಬ್ಬದ ಸಂಭ್ರಮ. 

ಗೂಗಲ್ ಡೂಡಲ್ ಗೂಗಲ್ ಗೆ ಹುಟ್ಟುಹಬ್ಬಕ್ಕೆ ವಿಶ್ ಮಾಡಿದೆ. ಕಳೆದ 20 ವರ್ಷಗಳಲ್ಲಿ ಗೂಗಲ್ ನಲ್ಲಿ ಸರ್ಚ್ ಮಾಡಿದ ವಿಡಿಯೋಗಳನ್ನೆಲ್ಲಾ ಒಟ್ಟು ಮಾಡಿ ಬಲೂನ್ ಕಟ್ಟಿ ಗಿಫ್ಟ್ ನೀಡಿದೆ. 

1998 ರಿಂದ 2018 ರ ವರೆಗೆ ಗೂಗಲ್ ಸಾಕಷ್ಟು ಅಭಿವೃದ್ಧಿಯಾಗಿದೆ. ಗೂಗಲ್ ಶುರುವಾದ ಆರಂಭದಲ್ಲಿ ಸರ್ಚ್ ಗೆ ಏನಾದರೂ ಕೊಟ್ಟರೆ ಕೇವಲ ಅದೊಂದನ್ನೇ ತೋರಿಸುತ್ತಿತ್ತು. ಈಗ ಹಾಗಿಲ್ಲ ಅದಕ್ಕೆ ಪೂರಕವಾದ ಬೇರೆ ಬೇರೆ ಮಾಹಿತಿಗಳನ್ನು ಸಜೆಸ್ಟ್ ಮಾಡುತ್ತದೆ. 

ಒಟ್ಟಿನಲ್ಲಿ ಮಾಹಿತಿಗಳ ಮಹಾಶೂರ ಗೂಗಲ್ ಮಹಾಶಯನಿಗೆ ಹ್ಯಾಪಿ ಬರ್ತಡೇ!