ಬೆಂಗಳೂರಿನ ಪೂರ್ವ ಭಾಗದಿಂದ ವಿಮಾನ ನಿಲ್ದಾಣಕ್ಕೆ ಹೋಗುವವರು ಮೇಖ್ರಿ ಅಥವಾ ಹೆಬ್ಬಾಳಕ್ಕೆ ಇನ್ಮುಂದೆ ಬರಬೇಕಿಂದಿಲ್ಲ.

ಬೆಂಗಳೂರು(ಫೆ.14): ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಿರ್ಮಿಸಲಾದ ಪರ್ಯಾಯ ರಸ್ತೆಗೆ ಸಾರ್ವಜನಿಕರಿಂದ ಉತ್ತಮ ‌ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಂಗಳೂರಿನ ಪೂರ್ವ ಭಾಗದಿಂದ ಬರುವ ವಾಹನಗಳಿಗೆ ಬೇಗೂರು ಗ್ರಾಮದ ಮೂಲಕ ಹಾದು ಹೋಗುವ ಪರ್ಯಾಯ ರಸ್ತೆ ನಿರ್ಮಿಸಲಾಗಿದ್ದು, ಸೋಮವಾರದಂದು ಸಂಚಾರಕ್ಕೆ ಮುಕ್ತವಾಗಿದೆ.

ಮೊದಲ ದಿನವೇ ಹೊಸರಸ್ತೆಗೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ವಾಹನ ಸವಾರರಿಗೆ ಅನುಕೂಲವಾಗುವಂತೆ ಅಧಿಕಾರಿಗಳನ್ನು ಪ್ರಮುಖ ಸ್ಥಳಗಳಲ್ಲಿ ನಿಯೋಜಿಸಲಾಗಿದೆಯೆಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಆರ್. ಹಿತೇಂದ್ರ ಅವರು ತಿಳಿಸಿದ್ದಾರೆ.

ಬಹಳ ಮಂದಿಗೆ ಈ ಪರ್ಯಾಯ ರಸ್ತೆಯ ಬಗ್ಗೆ ತಿಳಿದಿಲ್ಲ, ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಮಂದಿ ಈ ರಸ್ತೆಯನ್ನು ಬಳಸುತ್ತಾರೆ ಎಂದು ಅವರು ಹೇಳಿದ್ದಾರೆ. ಬೆಂಗಳೂರಿನ ಪೂರ್ವ ಭಾಗದಿಂದ ವಿಮಾನ ನಿಲ್ದಾಣಕ್ಕೆ ಹೋಗುವವರು ಮೇಖ್ರಿ ಅಥವಾ ಹೆಬ್ಬಾಳಕ್ಕೆ ಇನ್ಮುಂದೆ ಬರಬೇಕಿಂದಿಲ್ಲ.

ಹೊಸರಸ್ತೆಯ ಕೆಲ ಕಡೆ ಸ್ವಲ್ಪ ಕೆಲಸ‌ ಇನ್ನೂ ಬಾಕಿಯಿದ್ದು, ಏರ್ ಶೋ ಹಿನ್ನೆಲೆಯಲ್ಲಿ ಸಂಚಾರಕ್ಕೆ‌ ಮುಕ್ತವಾಗಿಸಲಾಗಿದೆ.