ಇಳಿದ ತೈಲ ದರ, ಬೆಂಗಳೂರಿನಲ್ಲಿ ಎಷ್ಟಿದೆ?

First Published 21, Jun 2018, 2:43 PM IST
Good News: Petrol, Diesel Prices Cut By Up To 14 Paise
Highlights

ತೈಲವನ್ನು ಜಿಎಸ್ಟಿ ವ್ಯಾಪ್ತಿಗೆ ತರಬೇಕು ಎಂಬ ಮಾತುಗಳು ಒಂದು ಕಡೆ ಕೇಳಿಬರುತ್ತಿವೆ. ನಿರಂತರವಾಗಿ ಏರುತ್ತಿದ್ದ ತೈಲ ದರ ಕಳೆದ 15 ದಿನಗಳಲ್ಲಿ ಇಳಿಕೆ ಹಾದಿಯನ್ನು ಹಿಡಿದಿದೆ. ಹಾಗಾದರೆ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲೆಗೆ ಎಷ್ಟು ನೀಡಬೇಕು ವಿವರ ಇಲ್ಲಿದೆ.

 

ನವದೆಹಲಿ (ಜೂ.21) ತೈಲವನ್ನು ಜಿಎಸ್ಟಿ ವ್ಯಾಪ್ತಿಗೆ ತರಬೇಕು ಎಂಬ ಮಾತುಗಳು ಒಂದು ಕಡೆ ಕೇಳಿಬರುತ್ತಿವೆ. ನಿರಂತರವಾಗಿ ಏರುತ್ತಿದ್ದ ತೈಲ ದರ ಕಳೆದ 15 ದಿನಗಳಲ್ಲಿ ಇಳಿಕೆ ಹಾದಿಯನ್ನು ಹಿಡಿದಿದೆ.

ಸತತ ಇಳಿಕೆ ಹಾದಿಯಲ್ಲಿದ್ದ ತೈಲ ದರ ಮತ್ತೆ ಕೊಂಚ ಇಳಿಕೆಯಾಗಿದ್ದು ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಪೆಟ್ರೋಲ್ ದರ 14 ಪೈಸೆ ಕಡಿಮೆಯಾಗಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನಾಲ್ಕು ದಿನಗಳ ಹಿಂದೆ ಮಾತನಾಡುತ್ತ ತೈಲದ ಮೇಲಿನ ಅಬಕಾರಿ ಸುಂಕ ಇಳಿಸಲು ಸಾಧ್ಯವಿಲ್ಲ ಎಂದಿದ್ದರು.

ಬೆಂಗಳೂರಿನಲ್ಲಿ ದರ ಎಷ್ಟಿದೆ? ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಗೆ 77.39 ರೂ ನೀಡಬೇಕು. ಅದೆ ಒಂದು ಲೀಟರ್ ಡೀಸೆಲ್ ಗೆ 68.73 ರೂ ನೀಡಬೇಕಿದೆ. ಬೆಂಗಳೂರಿಗೆ ಹೋಲಿಕೆ ಮಾಡಿದರೆ ಕೋಲ್ಕತ್ತಾ ಮತ್ತು ಮುಂಬೈನಲ್ಲಿ ಹೆಚ್ಚಿನ ಹಣ ತೆರಬೇಕಾಗಿದೆ.

loader