ನವದೆಹಲಿ :  ಪ್ರಧಾನಿ ನರೇಂದ್ರ ಮೋದಿ ಸರ್ಕಾರ  50 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡುವ ಸಾಧ್ಯತೆ ಇದೆ.  ಆದಷ್ಟು ಶೀಘ್ರ ಅವರ ಬೇಡಿಕೆಗಳನ್ನು ಈಡೇರಿಸುವ ಸಾಧ್ಯತೆ ಇದೆ. 

7ನೇ ವೇತನ ಆಯೋಗದ ಅನ್ವಯದಂತೆ  ಈಗಾಗಲೇ ವಿದೇಶ ಪ್ರವಾಸಕ್ಕೆ ತೆರಳಲು ಶೀಘ್ರ ಅನುಮತಿ ಒದಗಿಸುವ ಸಾಧ್ಯತೆ ಇದೆ. 

 ಅವರು ಯಾವ ದೇಶಗಳಿಗೆ ತೆರಳಲು ಇಚ್ಛಿಸುತ್ತಾರೋ ಆ ದೇಶಗಳಿಗೆ ತೆರಳಲು ಅವಕಾಶ ನೀಡಲಾಗುತ್ತದೆ.  ಮೂಲಗಳ ಪ್ರಕಾರ 10 ದೇಶಗಳಿಗೆ ತೆರಳುವ ಚಾನ್ಸ್ ದೊರೆಯಲಿದೆ ಎನ್ನಲಾಗಿದೆ. 

ಈಗಾಗಲೇ ಕೇಂದ್ರ ಸರ್ಕಾರಿ ನೌಕರರಿಗೆ ವಿದೇಶ ಪ್ರವಾಸದ ಅವಕಾಶ ನೀಡುವ ಬಗ್ಗೆ ಘೋಷಣೆ ಮಾಡಲಾಗಿದ್ದು ಪ್ರಧಾನಿ ಮೋದಿ ಒಪ್ಪಿಗೆ ದೊರೆಯುತ್ತಲೇ ಜಾರಿಗೆ ಬರಲಿದೆ. 

ಈ ಆದೇಶದಿಂದ ವಿದೇಶಗಳೊಂದಿಗೆ ಸಂಬಂಧಗಳ ಬಲವರ್ಧನೆಯೂ ಕೂಡ  ಹೆಚ್ಚುತ್ತದೆ. ಅಲ್ಲದೇ 2019ನೇ ಸಾಲಿನ ಲೋಕಸಭಾ ಚುನಾವಣೆಗೂ ಕೂಡ ಹೆಚ್ಚು ಅನುಕೂಲವಾಗಲಿದೆ.