Asianet Suvarna News Asianet Suvarna News

ಮೋದಿ ಸರ್ಕಾರದಿಂದ ಬೆಂಗಳೂರಿಗೆ ಗುಡ್ ನ್ಯೂಸ್..!

ಕರ್ನಾಟಕ ಚುನಾವಣೆ ಹತ್ತಿರವಾಗುತ್ತಿ ದ್ದಂತೆಯೇ ಕೇಂದ್ರ ಸರ್ಕಾರವು ಬೆಂಗಳೂರಿಗೆ ಮೆಗಾ ಸಬರ್ಬನ್ ರೈಲು ಯೋಜನೆಯ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ.ಈಗ ಇರುವ ರೈಲು ಮಾರ್ಗಗಳ ಜತೆ 170 ಕಿ.ಮೀ. ಎತ್ತರಿಸಿದ (ಎಲಿವೇಟೆಡ್) ರೈಲು ಮಾರ್ಗಗಳ ನಿರ್ಮಾ ಣವು ಈ ಪ್ರಸ್ತಾವನೆಯಲ್ಲಿನ ಪ್ರಮುಖ ಅಂಶವಾಗಿದೆ.

Good News For Bengaluru People

ನವದೆಹಲಿ: ಕರ್ನಾಟಕ ಚುನಾವಣೆ ಹತ್ತಿರವಾಗುತ್ತಿ ದ್ದಂತೆಯೇ ಕೇಂದ್ರ ಸರ್ಕಾರವು ಬೆಂಗಳೂರಿಗೆ ಮೆಗಾ ಸಬರ್ಬನ್ ರೈಲು ಯೋಜನೆಯ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ.ಈಗ ಇರುವ ರೈಲು ಮಾರ್ಗಗಳ ಜತೆ 170 ಕಿ.ಮೀ. ಎತ್ತರಿಸಿದ (ಎಲಿವೇಟೆಡ್) ರೈಲು ಮಾರ್ಗಗಳ ನಿರ್ಮಾ ಣವು ಈ ಪ್ರಸ್ತಾವನೆಯಲ್ಲಿನ ಪ್ರಮುಖ ಅಂಶವಾಗಿದೆ.

ಬೈಯ್ಯಪ್ಪನಹಳ್ಳಿ ಹಾಗೂ ಸಂಗೊಳ್ಳಿ ರಾಯಣ್ಣ ಬೆಂಗಳೂರು ಸಿಟಿ ರೈಲು ನಿಲ್ದಾಣಗಳನ್ನು ವಿಶ್ವದರ್ಜೆಗೆ ಏರಿಸುವುದು, ಬಾಣಸವಾಡಿ, ಯಲಹಂಕ, ಯಶವಂತ ಪುರ, ಕೆಂಗೇರಿ, ಕಾಕ್ಸ್ಟೌನ್, ಮಲ್ಲೇಶ್ವರ, ರಾಮನಗರ, ವೈಟ್‌ಫೀಲ್ಡ್, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ ರೈಲು ನಿಲ್ದಾಣಗಳನ್ನು ಆಧುನೀಕರಣಗೊಳಿಸುವುದೂ ಇದರಲ್ಲಿ ಸೇರಿದೆ. ಎಲಿವೇಟೆಡ್ ರೈಲು ಮಾರ್ಗದಲ್ಲಿ ವೇಗದ ರೈಲುಗಳನ್ನು ಓಡಿಸಬಹುದಾಗಿದೆ.

ಗಂಟೆಗೆ 90ರಿಂದ 125 ಕಿ.ಮೀ. ವೇಗದಲ್ಲಿ ರೈಲುಗಳನ್ನು ಓಡಿಸುವ ಪ್ರಸ್ತಾಪವಿದೆ. ಯೋಜನೆಯ ವೆಚ್ಚ ಸುಮಾರು 10ರಿಂದ 12 ಸಾವಿರ ಕೋಟಿ ರು. ಆಗಬಹುದು. ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ಯೋಜನೆ ಕೈಗೊಳ್ಳಲಾಗುತ್ತದೆ. ರಾಜ್ಯ ಸರ್ಕಾರಕ್ಕೂ ಸಹಭಾಗಿತ್ವ ವಹಿಸಲು ಹಾಗೂ ಅಗತ್ಯ ಜಮೀನು ಒದಗಿಸಲು ಕೋರಲಾಗುತ್ತದೆ ಎಂದು ಮೂಲಗಳು ಹೇಳಿವೆ. ‘ಬಜೆಟ್‌ನಲ್ಲಿ ಈ ಯೋಜನೆ ಘೋಷಣೆ ಆಗದುಎಂದೂರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Follow Us:
Download App:
  • android
  • ios