ಕೇಂದ್ರ ಸರ್ಕಾರದ 50 ಲಕ್ಷ ಉದ್ಯೋಗಿಗಳ ವೇತನ ಏರಿಕೆ

First Published 17, Mar 2018, 1:04 PM IST
Good news for 50 lakh Govt employees
Highlights

ಕೇಂದ್ರ ಸರ್ಕಾರ ಇದೀಗ ತನ್ನ 50 ಲಕ್ಷ ಉದ್ಯೋಗಿಗಳಿಗೆ ಸಿಹಿ ಸುದ್ದಿಯನ್ನು ನೀಡುತ್ತಿದೆ. ಯುಗಾದಿ ಹಬ್ಬದ ಸಂದರ್ಭದಲ್ಲಿಯೇ ಅವರಿಗೆ ಬಂಪರ್ ಗಿಫ್ಟ್ ದೊರಕಿದಂತಾಗಿದೆ.

ದಿಲ್ಲಿ : ಕೇಂದ್ರ ಸರ್ಕಾರ ಇದೀಗ ತನ್ನ 50 ಲಕ್ಷ ಉದ್ಯೋಗಿಗಳಿಗೆ ಸಿಹಿ ಸುದ್ದಿಯನ್ನು ನೀಡುತ್ತಿದೆ. ಯುಗಾದಿ ಹಬ್ಬದ ಸಂದರ್ಭದಲ್ಲಿಯೇ ಅವರಿಗೆ ಬಂಪರ್ ಗಿಫ್ಟ್ ದೊರಕಿದಂತಾಗಿದೆ.

7ನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರು ಸಂಬಳ ಏರಿಕೆ ಮಾಡಲಾಗುತ್ತಿದೆ. ವಿವಿಧ ವರದಿಗಳ ಪ್ರಕಾರವಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಕೆಳಹಂತದ ಉದ್ಯೋಗಿಗಳ ಸಂಬಳವನ್ನು ಏರಿಕೆ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.

ಕೇಂದ್ರ ಸರ್ಕಾರದ ಕೆಳಹಂತದ ನೌಕರರು 7ನೇ ವೇತನದ ಆಯೋಗದ ಅಡಿಯಲ್ಲಿ ಇದರ ಪಯೋಗವನ್ನು ಪಡೆದುಕೊಳ್ಳಲಿದ್ದಾರೆ.  ವೇತನ ಏರಿಕೆಯು ಏಪ್ರಿಲ್ 1 ರಿಂದಲೇ ಜಾರಿಯಾಗಲಿದೆ.ಕೇಂದ್ರ ಹಣಕಾಸು ಸಚಿವರಾದ ಅರುಣ್ ಜೇಟ್ಲಿ ಅವರು ಕೆಳಹಂತದ ನೌಕರರ ವೇತನ ಏರಿಕೆಗೆ ಹೆಚ್ಚು ಒತ್ತು ನೀಡಿದ್ದಾರೆ ಎನ್ನಲಾಗಿದೆ.

loader