ಭಾರತೀಯ ಗುಡ್ ಮಾರ್ನಿಂಗ್ ಮೆಸೇಜ್’ಗೆ ಸುಸ್ತಾದ ಇಂಟರ್ನೆಟ್..!

First Published 24, Jan 2018, 8:43 AM IST
Good Morning messages Eating up Smartphone space in India
Highlights

ಸ್ಮಾರ್ಟ್‌ಫೋನ್ ಅಗ್ಗವಾದ ಮೇಲೆ ಎಲ್ಲರ ಕೈಯಲ್ಲೂ ಮೊಬೈಲ್ ಬಂದಿದ್ದಾಯ್ತು. ಇದೀಗ ಅಂತರ್ಜಾಲ ಸೇವೆಯೂ ಅಗ್ಗವಾದ ಮೇಲೆ ಮೊಬೈಲ್ ಫೋನ್‌ಗಳಲ್ಲಿ ಫೋಟೋ, ವಿಡಿಯೋಗಳು ತುಂಬಿ ತುಳುಕುತ್ತಿವೆ.

ವಾಷಿಂಗ್ಟನ್: ಸ್ಮಾರ್ಟ್‌ಫೋನ್ ಅಗ್ಗವಾದ ಮೇಲೆ ಎಲ್ಲರ ಕೈಯಲ್ಲೂ ಮೊಬೈಲ್ ಬಂದಿದ್ದಾಯ್ತು. ಇದೀಗ ಅಂತರ್ಜಾಲ ಸೇವೆಯೂ ಅಗ್ಗವಾದ ಮೇಲೆ ಮೊಬೈಲ್ ಫೋನ್‌ಗಳಲ್ಲಿ ಫೋಟೋ, ವಿಡಿಯೋಗಳು ತುಂಬಿ ತುಳುಕುತ್ತಿವೆ. ಇದು ಅದ್ಯಾವ ಪ್ರಮಾಣ ತಲುಪಿದೆ ಎಂದರೆ, ಭಾರತೀಯ ಮೊಬೈಲ್ ಬಳಕೆದಾರರು ಪ್ರತಿ ಮುಂಜಾನೆ ಆಪ್ತರಿಗೆ ಕಳುಹಿಸುವ ಗುಡ್‌ಮಾರ್ನಿಂಗ್ ಸಂದೇಶದ ಹೊಡೆತಕ್ಕೆ ಇಂಟರ್ನೆಟ್ ವ್ಯವಸ್ಥೆಯೇ ಸುಸ್ತು ಹೊಡೆದಿದೆಯಂತೆ!

ನಿಜ ಭಾರತದ 3 ಸ್ಮಾರ್ಟ್‌ಫೋನ್ ಬಳಕೆದಾರರಲ್ಲಿ ಒಬ್ಬರ ಫೋನ್ ಪ್ರತಿ ದಿನ ಜಾಗವಿಲ್ಲವಾಗುತ್ತದೆ ಮತ್ತು ಕಾರ್ಯ ನಿರ್ವಹಣೆಗೆ ಅಡ್ಡಿಯಾಗುತ್ತಿದೆಯಂತೆ. ಇದಕ್ಕೆ ಗೂಗಲ್ ಸಂಶೋಧಕರ ತಂಡವೊಂದು ಕಾರಣ ಹುಡುಕಿದಾಗ, ಮೊಬೈಲ್ ತುಂಬೆಲ್ಲಾ ‘ಗುಡ್ ಮಾರ್ನಿಂಗ್’ ಸಂದೇಶ ತುಂಬಿರುವದೇ ಈ ಅವಾಂತರಕ್ಕೆ ಕಾರಣ ಎಂದು ಕಂಡುಬಂದಿದೆ. ಸೂರ್ಯೋದಯ, ಮುದ್ದಾದ ಮಕ್ಕಳು, ಹೂವುಗಳು, ಹಕ್ಕಿಗಳ ಚಿತ್ರಗಳೊಂದಿಗೆ ಈ ಸಂದೇಶ ಪ್ರತಿಯೊಬ್ಬರ ಮೊಬೈಲ್‌ಗೆ ಸಾಕಷ್ಟು ಸಂಖ್ಯೆಯಲ್ಲಿ ಹರಿದು ಬರುತ್ತವೆ.

ಅದರಲ್ಲೂ ಹೊಸದಾಗಿ ಇಂಟರ್ನೆಟ್ ಬಳಕೆ ಮಾಡುವವರು ಸ್ನೇಹಿತರು, ಕುಟುಂಬ ಮತ್ತು ಪರಿಚಿತರಿಗೆ ಸಂದೇಶ ರವಾನೆಯೊಂದಿಗೇ ದಿನ ಆರಂಭಿಸುತ್ತಾರೆ. ಹೊಸ ವರ್ಷದ ದಿನ ವಾಟ್ಸಾಪ್ ಒಂದರಲ್ಲೇ 2000 ಕೋಟಿ ಶುಭಾಷಯ ವಿನಿಮಯವಾಗಿದೆ ಎನ್ನಲಾಗಿದೆ.

ಇದೀಗ ಸಮಸ್ಯೆ ನಿವಾರಣೆಗೆ ಗೂಗಲ್ ಹೊಸ ಆ್ಯಪ್ ಅಭಿವೃದ್ಧಿ ಪಡಿಸಿದೆ. ಮುಂಜಾನೆಯ ಶುಭಾಷಯ ಸಂದೇಶಗಳನ್ನು ಡಿಲೀಟ್ ಮಾಡುವ ಆ್ಯಪ್ ಇದಾಗಿದೆ. ಡಿಸೆಂಬರ್‌ನಲ್ಲಿ ಅಭಿವೃದ್ಧಿ ಪಡಿಸಿರುವ ಈ ಆ್ಯಪ್ ಭಾರತದಲ್ಲಿ ಈಗಾಗಲೇ 1 ಕೋಟಿ ಡೌನ್ ಲೋಡ್ ಆಗಿದೆ. ಇದು ಜಗತ್ತಿನಲ್ಲೇ ಅತ್ಯಧಿಕವಾಗಿದೆ.

loader