ಗುಡ್ ಮಾರ್ನಿಂಗ್ ಕರ್ನಾಟಕ: ನೀವು ಓದಲೇಬೇಕಾದ 30 ಸುದ್ದಿಗಳು

1. ಇಂದು ಲಿಂಗಾಯತ ಸಮಾವೇಶ :

ತಾರಕಕ್ಕೇರಿದೆ ಲಿಂಗಾಯತ ಸ್ವತಂತ್ರ ಧರ್ಮಯುದ್ಧ ವಿಚಾರ - ವೀರಶೈವರ ವಿರೋಧದ ನಡುವೆಯೂ ಇಂದು ಕಲಬುರ್ಗಿಯಲ್ಲಿ ಲಿಂಗಾಯತ ಸಮಾವೇಶ - ನಗರ ಎನ್ ವಿ ಮೈದಾನದಲ್ಲಿ ಸಮಾವೇಶಕ್ಕೆ ಭರ್ಜರಿ ಸಿದ್ಧತೆ - 5 ಲಕ್ಷ ಜನ ಸೇರುವ ಸಾಧ್ಯತೆ - ಸಚಿವ ಎಂಬಿ ಪಾಟೀಲ್, ಶರಣಪ್ರಕಾಶ್ ಪಾಟೀಲಾ ಸೇರಿದಂತೆ ಹಲವರು ಭಾಗಿ

2. ಇಂದು ಪ್ರಧಾನಿ 36ನೇ ಮನ್ ಕಿ ಬಾತ್ :

ಇಂದು ಪ್ರಧಾನಿ ನರೇಂದ್ರ ಮೋದಿ 36ನೇ ಮನ್ ಕೀ ಬಾತ್ - ಬೆಳಗ್ಗೆ 11 ಗಂಟೆಗೆ ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ರೆಡಿಯೋ ಭಾಷಣ - 3 ವರ್ಷದಲ್ಲಿ 36 ಆವೃತ್ತಿ​ ಪೂರ್ಣಗೊಳಿಸಿದ ಮೋದಿ ಮನ್ ಕಿ ಬಾತ್

3. ವಿಶ್ವಸಂಸ್ಥೆ ಯಲ್ಲಿ ಪಾಕಿಸ್ತಾನದ ಮಾನ ಹರಾಜು:

ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನದ ಮಾನ ಹರಾಜು. ನಾವು ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದ್ದೇವೆ , ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರ ಬಿಂದು, ಪಾಕಿಸ್ತಾನ ಭಯೋತ್ಪಾದಕರನ್ನು ಹುಟ್ಟು ಹಾಕಿದೆ ಭಾರತ ಹೆಸರಾಂತ ವೈದ್ಯರು, ವಿಜ್ಞಾನಿಗಳನ್ನು ಹುಟ್ಟು ಹಾಕಿದೆ- ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಸುಷ್ಮಾ ಸ್ವರಾಜ್ ಭಾಷಣ

4. ಇಂದೋರ್'ನಲ್ಲಿ ಭಾರತ - ಆಸೀಸ್ ಸೆಣಸಾಟ:

ಇಂದೋರ್ ನಲ್ಲಿ ಇಂದು ಭಾರತ - ಆಸೀಸ್ ನಡುವೆ ಮೂರನೇ ಏಕದಿನ ಪಂದ್ಯ - ಗೆಲುವಿನ ನಾಗಾಲೋಟ ಮುಂದುವರೆಸಲು ಟೀಂ ಇಂಡಿಯಾ ಕಾತರ - ಸರಣಿ ಉಳಿಸಿಕೊಳ್ಳಲು ಇಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿ ಆಸ್ಟ್ರೇಲಿಯಾ 

5. ಕೆಪಿಎಲ್:

ಬೆಳಗಾವಿ ಪ್ಯಾಂಥರ್ಸ್ ಕೆಪಿಎಲ್ ಟಾಂಪಿಯನ್ - ಫೈನಲ್ ನಲ್ಲಿ ವಿಜಾಪುರ ಬುಲ್ಸ್ ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿದ ಬೆಳಗಾವಿ ತಂಡ - ಮೊದಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಬೆಳಗಾವಿ ಪ್ಯಾಂಥರ್ಸ್

6. ಇಂದು ಕೋಟೆನಾಡಿಗೆ ಸಿಎಂ :

ಇಂದು ಚಿತ್ರದುರ್ಗಕ್ಕೆ ಸಿಎಂ ಸಿದ್ದರಾಮಯ್ಯ - ತರಳಬಾಳು ಜಗದ್ಗುರು ಶಿವಕುಮಾರ್ ಶ್ರೀಗಳ 25ನೇ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಭಾಗಿ - ಮಠದಲ್ಲಿ ನಡೆಯುವ ಇತರೆ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳಲಿರುವ ಸಿದ್ದರಾಮಯ್ಯ

7. ದಸರಾದಲ್ಲಿ ಸಾಲು ಸಾಲು ಸ್ಪರ್ಧೆಗಳು:

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ - ಯೋಗೋತ್ಸವ, ಹಾಫ್​ ಮ್ಯಾರಥಾನ್​ ಜೊತೆಗೆ ಜಾವಾ ಮೋಟಾರ್ ಸೈಕಲ್ ಸವಾರಿ - ರಾಜ್ಯಮಟ್ಟದ ಪುರುಷರ ಮತ್ತು ಬಾಲಕರ ಕುಸ್ತಿ ಪಂದ್ಯದ ಜೊತೆಗೆ ಯೋಗಾಸನ ಸ್ಪರ್ಧೆ, ಸಂಜೆ ಹೊತ್ತಿಗೆ ನಡೆಯಲಿದೆ ಹಾಲು ಕರೆಯುವ ಸ್ಫರ್ದೆ

8. ಇಂದಿನಿಂದ ಶ್ರೀರಂಗಪಟ್ಟಣ ದಸರಾ:

ಶ್ರೀರಂಗಪಟ್ಟಣದಲ್ಲೂ ದಸರಾ ಸಂಭ್ರಮ - ಇಂದಿನಿಂದ ಸೆಪ್ಟೆಂಬರ್​ 26ರವರೆಗೆ ನಡೆಯಲಿದೆ ಉತ್ಸವ - ಜಂಬೂ ಸವಾರಿ ಮೂಲಕ ಶ್ರೀರಂಗಪಟ್ಟಣ ದಸರೆಗೆ ಇಂದು ಮಧ್ಯಾಹ್ನ ಚಾಲನೆ - ಮೆರವಣಿಗೆಗೆ ಜಾನಪದ ಕಲಾ ತಂಡಗಳು, ಸ್ತಬ್ಧ ಚಿತ್ರಗಳ ಮೆರುಗು

9. ಈಗ ಏನೂ ಹೇಳಲ್ಲ: ಎಚ್​ಡಿಡಿ

ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ವಿಚಾರ - ಸುಪ್ರೀಂಕೋರ್ಟ್ ಆದೇಶ ಪ್ರತಿ ಇನ್ನೂ ನನ್ನ ಕೈಸೇರಿಲ್ಲ - ಆದೇಶ ಪ್ರತಿ ಬಂದ ಮೇಲೆ ಪ್ರತಿಕ್ರಿಯೆ ಕೊಡ್ತೀನಿ ಅಂದ್ರು ದೇವೇಗೌಡ್ರು 

10. ರೈತರ ಮೇಲಿನ ಕೇಸ್​ ವಾಪಸ್​: ಸಿಎಂ

ನರಗುಂದ ಮಹದಾಯಿ ಹೋರಾಟಗಾರರ ಮೇಲಿನ ಕೇಸ್ ವಾಪಸ್ - ರೈತರ ಮೇಲೆ ಯಾವುದೇ ಕೇಸ್ ಹಾಕಿದ್ರೂ ಹಿಂಪಡೆಯಲಾಗುವುದು ಎಂದ ಸಿಎಂ - ಸಿದ್ದರಾಮಯ್ಯ ಹೇಳಿಕೆಗೆ ರೈತ ಹೋರಾಟಗಾರರು ಹರ್ಷ

11. ಶನೇಶ್ವರನಿಗೆ ಹೆದರಿದ ಕಳ್ಳ !

ಶನೇಶ್ವರನಿಗೆ ಹೆದರಿ ಕಾಲ್ಕಿತ್ತ ಕಳ್ಳ - ದೇವಸ್ಥಾನಕ್ಕೆ ಕದಿಯಲು ಬಂದವನು ಸೈಲೆಂಟ್ ಆಗಿ ವಾಪಸ್​ - ಮೈಸೂರಿನ ದಟ್ಟಗಳ್ಳಿಯ ಶನೇಶ್ವರ ದೇಗುಲದಲ್ಲಿ ನಡೆದ ಘಟನೆ - ಕಳ್ಳನ ಚಲನವಲನ ದೇವಾಲಯದ ಸಿಸಿಟಿವಿಯಲ್ಲಿ ಸೆರೆ

12. ಯುವಕನ ಬರ್ಬರ ಹತ್ಯೆ :

ಹಳೆ ವೈಷಮ್ಯ ಹಿನ್ನೆಲೆಯಲ್ಲಿ ದುಷ್ಕರ್ಮಿಗಳಿಂದ ಯುವಕನ ಹತ್ಯೆ - ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ -ಆರೋಪಿಗಳಿಗಾಗಿ ಬಲೆ ಬೀಸಿದ ಪೊಲೀಸ್ರು

13. ವಂಚಕ ಅರೆಸ್ಟ್ :

ನಕಲಿ ಆಧಾರ್​​ ಕಾರ್ಡ್​​​​ ಮಾಡಿಸಿಕೊಟ್ಟು ಸರ್ಕಾರದಿಂದ ಮನೆ ಕೊಡಿಸೋದಾಗಿ ವಂಚನೆ - ಮಹಾನ್​​ ವಂಚಕನನ್ನು ಹೆಡೆಮುರಿಕಟ್ಟಿದ ಹೆಚ್​ಎಎಲ್​ ಪೊಲೀಸ್ರು - ನಿವೃತ್ತ ಎಸಿಪಿ ಸೇರಿದಂತೆ ಹಲವಾರು ಜನರಿಗೆ ಲಕ್ಷಗಟ್ಟಲೆ ವಂಚಿಸಿದ್ದ ರಾಜ್​ಕುಮಾರ್​​ ಬಂಧನ

14. ತಿಮ್ಮಕ್ಕನಿಗೆ ಸರ್ಕಾರಿ ಜಮೀನು:

ಕೊನೆಗೂ ಸಾಲು ಮರದ ತಿಮ್ಮಕ್ಕನನ್ನು ಗುರುತಿಸಿದ ರಾಜ್ಯ ಸರ್ಕಾರ - ಗಿಡಗಳನ್ನು ನೆಟ್ಟು ಪೋಷಿಸಿದ ಪರಿಸರವಾದಿಗೆ ಸಿಗಲಿದೆ ಸರ್ಕಾರಿ ಜಮೀನು - 5 ಎಕರೆ ಜಮೀನು, ಮನೆ, ಅಗತ್ಯ ನೆರವು ನೀಡಲಾಗುವುದು ಎಂದ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ

15. ರಾಸುಗಳಿಗೆ ಸೊಳ್ಳೆ ಸಂಕಟ:

ರಾಯಚೂರು ಜಿಲ್ಲೆಯಾದ್ಯಂತ ರಕ್ತ ಹೀರುವ ಸೊಳ್ಳೆಗಳ ಕಾಟ - ಸೊಳ್ಳೆ ಕಿರಿಕಿರಿಯಿಂದ ಜಾನುವಾರುಗಳ ಮೂಕರೋದನೆ - ಹಾಲು ಉತ್ಪಾದನೆಯಲ್ಲೂ ಗಣನೀಯ ಇಳಿಕೆ - ಹೈನೋದ್ಯಮ ನಂಬಿದ್ದ ರೈತರು ಹೈರಾಣ - ದನಗಳ ರಕ್ಷಣೆಗೆ ಸೊಳ್ಳೆ ಪರದೆ ಮೊರೆ ಹೋದ ಜನ

16. ಬೆಂಕಿ ಪೊಟ್ಟಣ ಲಾರಿ ಪಲ್ಟಿ:

ವಿಜಯಪುರದ ಮುದ್ದೇಬಿಹಾಳ ಬಳಿ ಬೆಂಕಿ ಪೊಟ್ಟಣ ಲಾರಿ ಪಲ್ಟಿ - ಒಳಚರಂಡಿ ಕಾಮಗಾರಿಗೆ ತೋಡಿದ್ದ ಹಳ್ಳಕ್ಕೆ ಬಿದ್ದ ಲಾರಿ - ತಮಿಳನಾಡು ಮೂಲದ ಲಾರಿ ಮುದ್ದೇಬಿಹಾಳಕ್ಕೆ ಬಂದಿದ್ದ ವೇಳೆ ಘಟನೆ

17. ಸತ್ತ ಮೀನುಗಳ ರಾಶಿ:

ಕಾರವಾರದ ರವಿಂದ್ರನಾಥ ಟಾಗೋರ್​ ಬೀಚ್​ನಲ್ಲಿ ರಾಶಿಬಿದ್ದ ಸತ್ತ ಮೀನುಗಳು - ಬೋಟ್​ನಲ್ಲಿದ್ದ ಕೊಳೆತ ಮೀನುಗಳನ್ನು ಸಮುದ್ರದಲ್ಲಿ ಬೀಸಾಕಿ ಹೋದ ಮೀನುಗಾರರು - ಕೊಳೆತ ಮೀನುಗಳಿಂದ ಸಮುದ್ರ ತೀರದಲ್ಲಿ ದುರ್ನಾತ 

18. ಮೊನ್ನೆ ಉದ್ಘಾಟನೆಯಾಯ್ತು, ನಿನ್ನೆ ಕಿತ್ತೋಯ್ತು!

ಉದ್ಘಾಟನೆಯಾದ ಒಂದೇ ದಿನಕ್ಕೆ ಕಿತ್ತು ಹೋಯ್ತು ರಸ್ತೆ - 10 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ರಸ್ತೆ ಕಥೆ ಹರೋಹರ - ಕಳಪೆ ಕಾಮಗಾರಿಯಿಂದ ಬಿರುಕುಬಿಟ್ಟ ಸೇತುವೆ - ಅವ್ಯವಸ್ಥೆ ವಿರುದ್ಧ ಕೊಪ್ಪಳ ಜಿಲ್ಲೆಯ ಮುದ್ಲಾಪೂರ ಗ್ರಾಮಸ್ಥರ ಆಕ್ರೋಶ

19. 80 ಅಡಿ ಬಾವಿಗೆ ಬಿದ್ದಿದ್ದ ಬೆಕ್ಕು ರಕ್ಷಣೆ :

80 ಅಡಿ ಬಾವಿಗೆ ಬಿದ್ದಿದ್ದ ಬೆಕ್ಕನ್ನು ರಕ್ಷಿಸಿದ ಬಾಲಕ - ಪ್ರಾಣದ ಹಂಗು ತೊರೆದು ಮಾನವೀಯತೆ ಮೆರೆದ ಬಾಲಕ - ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದಲ್ಲಿ‌ ಘಟನೆ - 15 ವರ್ಷದ ಬಾಲಕ ಕೆಲಸಕ್ಕೆ ಹಲವರ ಮೆಚ್ಚುಗೆ 

20. ಚಿರತೆ ಸಾವು:

ತುಮಕೂರಿನಲ್ಲಿ ವಾಹನ ಡಿಕ್ಕಿ ಹೊಡೆದು ಚಿರತೆ ಸಾವು - ಕುಣಿಗಲ್ ತಾಲೂಕಿನ ದೊಂಬರಹಟ್ಟಿ ಬಳಿ ಘಟನೆ - ಅರಣ್ಯಾಧಿಕಾರಿಗಳಿಂದ ಪರಿಶೀಲನೆ

21. ಲಾರಿ ಧಗಧಗ :​

ಚಲಿಸುತ್ತಿದ್ದ ಕಾಂಕ್ರೀಟ್ ಮಿಕ್ಸರ್ ಲಾರಿ ರಸ್ತೆಯಲ್ಲೇ ಧಗಧಗ - ಬೆಂಗಳೂರಿನ ಹೊಸೂರು ಮುಖ್ಯರಸ್ತೆಯ ಸಿಲ್ಕ್ ಬೋರ್ಡ್ ಬಳಿ ಅವಘಡ - ಶಾರ್ಟ್ ಸರ್ಕ್ಯೂಟ್'ನಿಂದ ಆವರಿಸಿದ ಬೆಂಕಿಯ ಕೆನ್ನಾಲಿಗೆ

22. ಅಂಗಡಿಗಳ ತೆರವು ಕಾರ್ಯ:

ಕಾರವಾರದ ಮುದಗಾ ಬಂದರು ಪ್ರದೇಶದಲ್ಲಿ ಅಂಗಡಿಗಳ ತೆರವು ಕಾರ್ಯ - ಸಣ್ಣ ಪುಟ್ಟ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸ್ತಿದ್ದವರಿಗೆ ಎದುರಾಗಿದೆ ಸಂಕಷ್ಟ - ಸೀಬರ್ಡ್​ ಯೋಜನೆಯಿಂದ ನಿರಾಶ್ರಿತರಾದವರು ಮತ್ತೆ ಕಂಗಾಲು

23. ಈಜಲು ಹೋದ ಬಾಲಕ ನೀರುಪಾಲು:

ತುಂಗಾ ನಾಲೆಯಲ್ಲಿ ಈಜಲು ಹೋಗಿದ್ದ ಬಾಲಕ ನೀರುಪಾಲು - ಶಿವಮೊಗ್ಗದ ಹೊರವಲಯ ತ್ರಿಮೂರ್ತಿ ನಗರದಲ್ಲಿ ಘಟನೆ - ನೀರಿನ ಸೆಳೆತಕ್ಕೆ ಅನೀಶ್ ಸಾವು, ಮತ್ತೊಬ್ಬ ಬಾಲಕನ ಮೃತದೇಹಕ್ಕಾಗಿ ಶೋಧ

24. ಮಕ್ಕಳ ಅಕ್ಕಿ ಕದ್ದ ಅಧಿಕಾರಿ!

ಅಕ್ಷರ ದಾಸೋಹದ ಅಕ್ಕಿ ಕದ್ದು ಸಿಕ್ಕಿಬಿದ್ದ ಅಧಿಕಾರಿ - 12 ಮೂಟೆ ಅಕ್ಕಿ ಸಾಗಿಸುತ್ತಿದ್ದಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಲೋಕೇಶ್ - ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ಘಟನೆ - ಉಗ್ರಾಣ ಅಧಿಕಾರಿ‌ ಲೋಕೇಶ್​ಗೆ ಗ್ರಾಮಸ್ಥರ ತರಾಟೆ

25. ಇಲ್ಲಿ ಶೌಚಾಲಯವೇ ಇಲ್ಲ! 

ಕಾರವಾರದ ಬೈತಕೋಲ ಮೀನುಗಾರಿಕಾ ಜನವಸತಿ ಪ್ರದೇಶದಲ್ಲಿ ಶೌಚಾಲಯವೇ ಇಲ್ಲ - 90 ಮನೆಗಳಲ್ಲಿ ಟಾಯ್ಲೆಟ್​ ಇಲ್ಲದೆ ಮಹಿಳೆಯರು, ಮಕ್ಕಳ ಪರದಾಟ - ಅಧಿಕಾರಿಗಳೇ ಇನ್ನಾದ್ರೂ ಎಚ್ಚೆತ್ತುಕೊಳ್ಳಿ

26. ದೇವಸ್ಥಾನದಲ್ಲಿ ಜಟಾಪಟಿ:

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಭೂದೇವಿ ದೇವಸ್ಥಾನದಲ್ಲಿ ಜಟಾಪಟಿ - ದೇವಸ್ಥಾನ ಪುರೋಹಿತ ವ್ಯಾಜ್ಯ ವಿಚಾರಕ್ಕೆ ಗಲಾಟೆ - ದೇವಸ್ಥಾನದ ಟ್ರಸ್ಟಿ ಹಾಗೂ ಪುರೋಹಿತ ಕುಟುಂಬಗಳ ಮಧ್ಯೆ ಮಾರಾಮಾರಿ - ಗಾಯಗೊಂಡು ಆಸ್ಪತ್ರೆ ಸೇರಿದ ನಾಲ್ವರು ಮಹಿಳೆಯರು

27. ಮೂಡಲಗಿ ತಾಲೂಕು ಕೇಂದ್ರಕ್ಕೆ ಪಟ್ಟು:

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮೂಡಲಗಿ ಪಟ್ಟಣವನ್ನ ತಾಲೂಕು ಕೇಂದ್ರವನ್ನಾಗಿ ಘೋಷಿಸುವಂತೆ ಆಗ್ರಹ - ಒಡೆದ ಗಾಜಿನ ಚೂರುಗಳ ಮೇಲೆ ನಡೆದು ವಿಭಿನ್ನ ಪ್ರತಿಭಟನೆ - ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

28. ಮೀನುಗಳ ಮಾರಣಹೋಮ :

ಆನೇಕಲ್ ತಾಲೂಕಿನ ಬೊಮ್ಮಸಂದ್ರ ಕೆರೆಯಲ್ಲಿ ಸಾವಿರಾರು ಮೀನುಗಳ ಮಾರಣಹೋಮ - ರಾಸಾಯನಿಕ ತ್ಯಾಜ್ಯ ಕೆರೆಗೆ ಸೇರಿ ಜಲಚರಗಳ ಸಾವು - ಕೆರೆ ಸ್ವಚ್ಛತೆ ಮಾಡುವಂತೆ ಸ್ಥಳೀಯರ ಆಗ್ರಹ

29. ನೃತ್ಯ ಕಾರಂಜಿಯ ಸೊಬಗು:

ಶ್ರೀರಂಗಪಟ್ಟಣದ ಕೆ.ಆರ್.ಎಸ್ ಬೃಂದಾವನದಲ್ಲಿ ನೃತ್ಯ ಕಾರಂಜಿ - ದಸರಾ ಹಿನ್ನಲೆಯಲ್ಲಿ ಬೃಂದಾವನದಲ್ಲಿದ್ದ ನೃತ್ಯ ಕಾರಂಜಿಗೆ ಧ್ವನಿ ಮತ್ತು ಲೇಸರ್ ಬೆಳಕಿನ ವ್ಯವಸ್ಥೆ - ಹೊಸ ರೂಪದ ನೃತ್ಯ ಕಾರಂಜಿಗೆ ಪ್ರವಾಸಿಗರು ಫುಲ್​ ಫಿದಾ

30. ಹೆಬ್ಬಾವಿನ ಜೊತೆ ಗೋಲ್ಡನ್​ಸ್ಟಾರ್ ಸರಸ:

ಕೊಲೊಂಬೋದಲ್ಲಿ ಗೋಲ್ಡನ್​ ಸ್ಟಾರ್​​ ಫ್ಯಾಮಿಲಿ - ವಿದೇಶದಲ್ಲಿ ಪತ್ನಿ, ಮಕ್ಕಳೊಂದಿಗೆ ದಸರಾ ರಜಾ ಮಜಾ - ಹೆಬ್ಬಾವಿನ ಜೊತೆ ಗಣೇಶ್​ ಹಾಗೂ ಪುತ್ರನ ಸರಸ - ಇನ್​ಸ್ಟಾಗ್ರಾಂನಲ್ಲಿ ಫೋಟೋ ಶೇರ್​ ಮಾಡಿ ಸಂತಸ ಹಂಚಿಕೊಂಡ ಶಿಲ್ಪಾ ಗಣೇಶ್​