ಅನಿಲ ಭಾಗ್ಯ ಯೋಜನೆಯಲ್ಲಿ ಭಾರಿ ಅಕ್ರಮ ..?

First Published 26, Jul 2018, 1:18 PM IST
GolMaal In Anila Bhagya Scheme
Highlights

ಹಿಂದಿನ ಸರ್ಕಾರದ ಅನಿಲ ಭಾಗ್ಯ ಯೋಜನೆಯಲ್ಲಿ ಭಾರೀ ಅಕ್ರಮ ನಡೆದಿರುವುದು ಇದೀಗ ಬೆಳಕಿಗೆ ಬಂದಿದೆ. ಸರ್ಕಾರ ಗ್ಯಾಸ್ ಸ್ಟೌ ಖರೀದಿ ಮಾಡಲು ಎಂಎಸ್ಐಎಲ್ ಗೆ ವಹಿಸಲು ನಿರ್ಧಾರ ಮಾಡಿ ಆದೇಶ ನೀಡುವ ಮುನ್ನವೇ ಖರೀದಿ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ. 

ಬೆಂಗಳೂರು :  ಹಿಂದಿನ ಸರ್ಕಾರದ ವೇಳೆ ಆರಂಭಿಸಲಾಗಿದ್ದ ಅನಿಲ ಭಾಗ್ಯ ಯೋಜನೆಯ ಗ್ಯಾಸ್ ಸ್ಟೌ ಖರೀದಿಯಲ್ಲಿ  ಭಾರಿ ಅಕ್ರಮ ನಡೆದಿರುವ ವಿಚಾರವೀಗ ಬೆಳಕಿಗೆ ಬಂದಿದೆ.  

ಸರ್ಕಾರದಿಂದ ನೀಡಲಾಗುವ ಅನಿಲ ಭಾಗ್ಯ ಯೋಜನೆಗೆ  MSIL ಗೆ ಗ್ಯಾಸ್ ಸ್ಟೌ ಖರೀದಿಯ ಟೆಂಡರ್ ನೀಡಲು ನಿರ್ಧಾರ ಮಾಡಲಾಗಿತ್ತು. ಆದರೆ ಸರ್ಕಾರ ಈ ನಿಟ್ಟಿನಲ್ಲಿ ಆದೇಶ ಪ್ರಕಟಿಸುವ ಮುನ್ನವೇ MSIL ಗ್ಯಾಸ್ ಸ್ಟೌ ಖರೀದಿ ಮಾಡಿತ್ತು.  

ಆದೇಶ ಬರುವ ಎರಡು ತಿಂಗಳ  ಮುನ್ನವೇ ಗ್ಯಾಸ್ ಸ್ಟೌ ಖರೀದಿ ಮಾಡಿದ್ದು,  ಒಂದು ಲಕ್ಷ ಗ್ಯಾಸ್ ಸ್ಟೌ ಗಳನ್ನು MSIL ಎಂ.ಡಿ ಜಿ.ಸಿ.ಪ್ರಕಾಶ್ ಖರೀದಿ ಮಾಡಿದ್ದರು.

ಅನಿಲ ಭಾಗ್ಯ ಯೋಜನೆಯ ಗ್ಯಾಸ್ ಸ್ಟೌ ಖರೀದಿ ಮಾಡಲು 2017 ನವೆಂಬರ್ 23ರಂದು ಸರ್ಕಾರದ ಆದೇಶ ಪ್ರಕಟ ಮಾಡಿದ್ದು, ಆದರೆ ಎಂಎಸ್ ಐಎಲ್ 2017 ಸೆಪ್ಟೆಂಬರ್ 22ರಂದೇ ಗ್ಯಾಸ್ ಸ್ಟೌ  ಖರೀದಿ ಮಾಡಲು ಮುಂದಾಗಿತ್ತು. ಇದೀಗ ಸರ್ಕಾರದ ಆದೇಶ ಬರುವ ಮುನ್ನವೇ ಗ್ಯಾಸ್ ಸ್ಟೌ ಖರೀದಿ ಮಾಡಿದ್ದರ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿದೆ.

loader