ಚಿನಿವಾರ ಮಾರುಕಟ್ಟೆಯಲ್ಲಿ ಬಂಗಾರ ಬೇಡಿಕೆ ಏರಿಕೆಯಾದ ಪರಿಣಾಮ ಚಿನ್ನದ ದರದಲ್ಲಿ ಏರಿಕೆ ಕಂಡು ಬಂದಿದೆ. 

ನವದೆಹಲಿ : ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಏರಿಳಿತ ನಿರಂತರವಾಗಿರುತ್ತದೆ. ಅದರಂತೆ ಇದೀಗ ಮತ್ತೆ ಚಿನ್ನದ ದರದಲ್ಲಿ ಏರಿಕೆ ಕಂಡು ಬಂದಿದೆ. 

ಚಿನಿವಾರ ಮಾರುಕಟ್ಟೆಯಲ್ಲಿ ಬಂಗಾರ ಬೇಡಿಕೆ ಏರಿಕೆಯಾದ ಪರಿಣಾಮ ಚಿನ್ನದ ದರದಲ್ಲಿ ಏರಿಕೆ ಕಂಡು ಬಂದಿದೆ. ಪ್ರತೀ 10 ಗ್ರಾಂ ಚಿನ್ನದ ದರದ ಮೇಲೆ 350 ರು. ಏರಿಕೆ ಕಂಡು ಬಂದಿದೆ. 

ಇದರಿಂದ ಪ್ರತೀ 10 ಗ್ರಾಂ ಚಿನ್ನದ ಬೆಲೆ 32,475 ರು.ಗಳಾಗಿದೆ. ಚಿನಿವಾರ ಮಾರುಕಟ್ಟೆಯಲ್ಲಿ ನಿರಂತರವಾಗಿ ಬೇಡಿಕೆ ಹೆಚ್ಚಳವಾಗಿರುವುದೇ ಬೆಲೆ ಏರಿಕೆಗೆ ಕಾರಣವಾಗಿದೆ. 

ಇನ್ನು ಇದೇ ಸಂದರ್ಭದಲ್ಲಿ ಬೆಳ್ಳಿಯ ಬೆಲೆಯಲ್ಲಿಯೂ ಕೂಡ ಅತ್ಯಧಿಕ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿದೆ. ಒಂದು ಕೆ.ಜಿ ಬೆಳ್ಳಿಯ ಬೆಲೆಯಲ್ಲಿ 250 ರು. ಕಂಡು ಬಂದಿದೆ. ಇದರಿಂದ ಒಂದು ಕೆಜಿ ಬೆಳ್ಳಿಯ ಬೆಲೆ 41,550 ರು.ನಷ್ಟಾಗಿದೆ.