ಚಿನ್ನ ಕೊಳ್ಳುವರಿಗೆ ಗುಡ್ ನ್ಯೂಸ್ : ಬೆಲೆಯಲ್ಲಿ ಭರ್ಜರಿ ಇಳಿಕೆ

First Published 31, Mar 2018, 1:09 PM IST
Gold Prices Fall In Market
Highlights

ಇನ್ನೇನು ದೇಶದಲ್ಲಿ ಮದುವೆ ಸೀಸನ್’ಗಳು ಆರಂಭವಾಗಿದೆ. ದೇಶದಲ್ಲಿ ಬಂಗಾರ ಕೊಳ್ಳುವವರ ಸಂಖ್ಯೆಯೂ ಕೂಡ ಏರಿಕೆಯಾಗಲಿದೆ.  ಆದ್ದರಿಂದ ಬಂಗಾರದ ಬೇಡಿಕೆಯೂ ಕೂಡ ಹೆಚ್ಚಾಗಲಿದೆ. ಆದರೆ ಬೇಡಿಕೆ ಹೆಚ್ಚುವುದರಿಂದ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆಯೇ ಎಂದು ನೀವು ಚಿಂತೆ ಮಾಡುವ ಅಗತ್ಯವಿಲ್ಲ. 

ನವದೆಹಲಿ : ಇನ್ನೇನು ದೇಶದಲ್ಲಿ ಮದುವೆ ಸೀಸನ್’ಗಳು ಆರಂಭವಾಗಿದೆ. ದೇಶದಲ್ಲಿ ಬಂಗಾರ ಕೊಳ್ಳುವವರ ಸಂಖ್ಯೆಯೂ ಕೂಡ ಏರಿಕೆಯಾಗಲಿದೆ.  ಆದ್ದರಿಂದ ಬಂಗಾರದ ಬೇಡಿಕೆಯೂ ಕೂಡ ಹೆಚ್ಚಾಗಲಿದೆ. ಆದರೆ ಬೇಡಿಕೆ ಹೆಚ್ಚುವುದರಿಂದ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆಯೇ ಎಂದು ನೀವು ಚಿಂತೆ ಮಾಡುವ ಅಗತ್ಯವಿಲ್ಲ. 

ಬಂಗಾರ ಕೊಳ್ಳಬೇಕೆಂದು ಕೊಂಡಿದ್ದಲ್ಲಿ ನಿಮಗಿಲ್ಲಿದೆ  ಒಂದು ಗುಡ್ ನ್ಯೂಸ್.

ಸ್ಥಳೀಯ ಮಾರುಕಟ್ಟೆಗಳಲ್ಲಿ ಚಿನ್ನದ ಬೇಡಿಕೆ ಕುಸಿದ ಹಿನ್ನೆಲೆಯಲ್ಲಿ ಬಂಗಾರದ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ 650 ರು. ಇಳಿಕೆಯಾಗಿದೆ.  ಇದರಿಂದ 10 ಗ್ರಾಂ ಚಿನ್ನದ ಬೆಲೆ 31,300 ರು. ಆದಂತಾಗಿದೆ. ದಿಲ್ಲಿ ಚಿನ್ನದ ಮಾರುಕಟ್ಟೆಯಲ್ಲಿ ಶೇ.99ರಷ್ಟು ಶುದ್ಧ ಚಿನ್ನದ ಬೆಲೆಯಲ್ಲಿ 650 ರು. ಇಳಿಕೆಯಾಗಿದೆ.

ಇನ್ನು ಬೆಳ್ಳಿಯ ಬೆಲೆಯಲ್ಲಿಯೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ಕುಸಿತವಾಗಿದ್ದು, ಒಂದು ಕೆಜಿ ಬೆಳ್ಳಿಯ ಬೆಲೆ 39,150 ರು.ಗಳಾಗಿದೆ.

loader