ಈ ಮೂವರು ಮುತ್ತೂಟ್ ಫೈನಾನ್ಸ್​ಗೆ ನುಗ್ಗಿ ಬಂದೂಕು ಮತ್ತು ಚಾಕು ತೋರಿಸಿ ಬೆದರಿಸಿದ್ದಾರೆ.

ಗುಜರಾತ್​ನಲ್ಲಿ ಕಳ್ಳರು ಕೈಚಳ ತೋರಿಸಿದ್ದಾರೆ. ಇಲ್ಲಿನ ಧೋರಾಜಿ ಪಟ್ಟಣದಲ್ಲಿನ ಮುತ್ತೂಟ್‌ ಫೈನಾನ್ಸ್‌ ಸಂಸ್ಥೆಯಿಂದ 90 ಲಕ್ಷ ಮೌಲ್ಯದ ಐದು ಕೆ.ಜಿ ಚಿನ್ನಾಭರಣಗಳನ್ನು ಮೂವರು ಬಂದೂಕುಧಾರಿಗಳು ಲೂಟಿ ಮಾಡಿ ಪರಾರಿಯಾಗಿದ್ದಾರೆ. ಈ ಮೂವರು ಮುತ್ತೂಟ್ ಫೈನಾನ್ಸ್​ಗೆ ನುಗ್ಗಿ ಬಂದೂಕು ಮತ್ತು ಚಾಕು ತೋರಿಸಿ ಬೆದರಿಸಿದ್ದಾರೆ. ನಂತರ ಸಿಬ್ಬಂದಿಯತ್ತ ಬಂದೂಕು ತೋರಿಸಿ ಬೆದರಿಸಿದ ದುಷ್ಕರ್ಮಿಗಳು, ಚಿನ್ನದ ಲಾಕರ್‌ ತೆಗೆಸಿ ಚಿನ್ನಾಭರಣ ಹೊತ್ತೊಯ್ದಿದ್ದಾರೆ. ಕಳ್ಳತನದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿ ಕಳ್ಳರಿಗಾಗಿ ಬಲೆ ಬೀಸಿದ್ದಾರೆ.

Add Asianetnews Kannada as a Preferred SourcegooglePreferred