ಜಾಗತಿಕ ಮಾರುಕಟ್ಟೆಯಲ್ಲಿ ದಿನದಿನಕ್ಕೂ ಹಳದಿ ಲೋಹದ ಬೆಲೆಯಲ್ಲಿ ಏರಿಳಿತ ಕಂಡು ಬರುತ್ತದೆ. ಅದರಂತೆ ಇದೀಗ ಚಿನ್ನದ ಬೆಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ. 

ನವದೆಹಲಿ :  ಜಾಗತಿಕ ಮಾರುಕಟ್ಟೆಯಲ್ಲಿ ದಿನದಿನಕ್ಕೂ ಹಳದಿ ಲೋಹದ ಬೆಲೆಯಲ್ಲಿ ಏರಿಳಿತ ಕಂಡು ಬರುತ್ತದೆ. ಅದರಂತೆ ಇದೀಗ ಚಿನ್ನದ ಬೆಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ. 

ಪ್ರತೀ 10 ಗ್ರಾಂ ಚಿನ್ನದ ಬೆಲೆಯಲ್ಲಿ 96 ರು. ಇಳಿಕೆಯಾಗಿದೆ. ಇದರಿಂದ ಪ್ರತೀ 10 ಗ್ರಾಂ ಚಿನ್ನದ ಬೆಲೆಯು 31,401 ರು.ಗಳಾದಂತಾಗಿದೆ. 

ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆಯು ಇಳಿಮುಖವಾದ ಹಿನ್ನೆಲೆಯಲ್ಲಿ ಬೆಲೆಯಲ್ಲಿಯೂ ಕೂಡ ಕುಸಿತ ಕಂಡು ಬಂದಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಇನ್ನು ಜಾಗತಿಕವಾಗಿಯೂ ಚಿನ್ನದ ದರದ ಮೇಲೆ ಶೇ.0.28ರಷ್ಟು ಇಳಿಮುಖವಾಗಿದ್ದು, ಇದರಿಂದ ಪ್ರತೀ ಔನ್ಸ್ ಚಿನ್ನದ ದರ 1,296.30 ಅಮೆರಕನ್ ಡಾಲರ್ ನಷ್ಟಿದೆ.