ಚಿನ್ನದ ಬೆಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಕುಸಿತ : ಚಿನ್ನ ಪ್ರಿಯರಿಗೆ ಶುಭ ಸುದ್ದಿ

First Published 23, Feb 2018, 1:30 PM IST
Gold futures drop on weak Global cues profit booking
Highlights

ಗತಿಕವಾಗಿ ಚಿನ್ನದ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ. ಚಿನ್ನದ ಬೇಡಿಕೆ ಕುಸಿದ ಹಿನ್ನೆಲೆಯಲ್ಲಿ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ.

ನವದೆಹಲಿ :  ಜಾಗತಿಕವಾಗಿ ಚಿನ್ನದ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ. ಚಿನ್ನದ ಬೇಡಿಕೆ ಕುಸಿದ ಹಿನ್ನೆಲೆಯಲ್ಲಿ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ. 10 ಗ್ರಾಂ ಚಿನ್ನದ ಬೆಲೆ 108 ರು. ಕುಸಿದಿದ್ದು, 30,621 ರು.ಗಳಷ್ಟಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಇಳಿಮುಖವಾದ ಹಿನ್ನೆಲೆಯಲ್ಲಿ ಚಿನ್ನದ ವ್ಯಾಪಾರ ಕುಸಿದಿದ್ದು ಬೆಲೆ ಕುಸಿಯಲು ಪ್ರಮುಖ ಕಾರಣವಾಗಿದೆ.

ಜಾಗತಿಕವಾಗಿ ಚಿನ್ನದ ಬೆಲೆಯು ಶೇ. 0.37ರಷ್ಟು  ಇಳಿಕೆಯಾಗಿದೆ. ಡಾಲರ್ ಮೌಲ್ಯವೂ ಕೂಡ ಚಿನ್ನದ ಬೆಲೆ ಮೇಲೆ ಪರಿಣಾಮವನ್ನುಂಟು ಮಾಡಿದೆ.

 

loader