ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಸಾಧ್ಯವಾಗದ ಕಾರಣ ತಿರುವನಂತಪುರದ ಪ್ರತಿಷ್ಠಿತ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಒಕ್ಕೂಟವು ಈ ಯೋಜನೆ ಜಾರಿಗೊಳಿಸಿದೆ

ತಿರುವನಂತಪುರಂ(ಅ.30): ದೇವರನಾಡು ಕೇರಳದ ತಿರುವನಂತಪುರದಲ್ಲಿ ಬೀದಿ ನಾಯಿಗಳ ಭೀತಿ ಎದುರಾಗಿದೆ. ಬೀದಿ ನಾಯಿಗಳ ಹಾವಳಿಗೆ ತತ್ತರಿಸಿರುವ ಕೇರಳ ಜನತೆ ರಸ್ತೆಯಲ್ಲಿ ಸಂಚರಿಸುವಾಗ ನೆಮ್ಮದಿಯೇ ಇಲ್ಲದಂತಾಗಿದೆ. ನಾಯಿ ದಾಳಿಗೆ 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸದ್ಯ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಸಾಧ್ಯವಾಗದ ಕಾರಣ ತಿರುವನಂತಪುರದ ಪ್ರತಿಷ್ಠಿತ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಒಕ್ಕೂಟವು ನಾಯಿ ಕೊಂದವರಿಗೆ ಚಿನ್ನದ ನಾಣ್ಯ ಕೊಡುವುದಾಗಿ ಘೋಷಿಸಿದೆ. ಯಾರು ಹೆಚ್ಚು ನಾಯಿಗಳನ್ನು ಸಾಯಿಸುತ್ತಾರೊ ಅವರಿಗೆ ಹೆಚ್ಚು ನಾಣ್ಯ ನೀಡುವುದಾಗಿ ಹೇಳಿರುವ ಸಂಘ ಡಿಸೆಂಬರ್ 10ರ ವರೆಗೂ ಗಡುವು ನೀಡಿದೆ.