ಕಾನ್ಪುರದ ಸರ್ವೇಶ್ ಎಂಬಾತನ ಮನೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಮನೆ ಕಟ್ಟಿಸಲು ಕೂಡಿಟ್ಟ 66 ಸಾವಿರ ರೂಪಾಯಿ ಕುರಿಯೊಂದು ತಿಂದು ಹಾಕಿದೆ ಎಂದು ಈತ ಆರೋಪಿಸಿದ್ದಾನೆ. ಇದು ಹೇಗೆ ಸಾಧ್ಯ? ಅಂತೀರಾ ಹಾಗಾದ್ರೆ ಇಲ್ಲಿದೆ ನೋಡಿ ವಿವರ

ನವದೆಹಲಿ(ಜೂ.07): ಕಾನ್ಪುರದ ಸರ್ವೇಶ್ ಎಂಬಾತನ ಮನೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಮನೆ ಕಟ್ಟಿಸಲು ಕೂಡಿಟ್ಟ 66 ಸಾವಿರ ರೂಪಾಯಿ ಕುರಿಯೊಂದು ತಿಂದು ಹಾಕಿದೆ ಎಂದು ಈತ ಆರೋಪಿಸಿದ್ದಾನೆ. ಇದು ಹೇಗೆ ಸಾಧ್ಯ? ಅಂತೀರಾ ಹಾಗಾದ್ರೆ ಇಲ್ಲಿದೆ ನೋಡಿ ವಿವರ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಘಟನೆಯ ಕುರಿತಾಗಿ ತಿಳಿಸಿರುವ ಸರ್ವೇಶ್' ಮನೆ ಕಟ್ಟಲೆಂದು ತುಂಬಾ ಕಷ್ಟಪಟ್ಟು ಹಣ ಕೂಡಿಟ್ಟಿದ್ದೆ. ಆದರೆ ಮನೆ ಕೆಲಸ ಆರಂಭವಾಗಿದ್ದು, ಇಟ್ಟಿಗೆ ತರುವ ಸಲುವಾಗಿ 66 ಸಾವಿರ ರೂಪಾಯಿ ಹಣವನ್ನು ಹೊರ ತೆಗೆದು ಪ್ಯಾಂಟ್ ಜೇಬಿನಲ್ಲಿರಿಸಿದ್ದೆ. ಎಲ್ಲವೂ ಎರಡು ಸಾವಿರ ರೂಪಾಯಿ ನೋಟುಗಳಾಗಿದ್ದವು. ಬಳಿಕ ಸ್ನಾನಕ್ಕೆ ತೆರಳಿದ್ದೆ ಅಷ್ಟರಲ್ಲೇ ಬಂದ ಕುರಿ ಪ್ಯಾಂಟ್ ಜೇಬಿನಲ್ಲಿದ್ದ ನೋಟುಗಳನ್ನು ತಿನ್ನಲಾರಂಭಿಸಿದೆ. ಸ್ನಾನ ಮುಗಿಸಿ ವಾಪಾಸಾಗುವಷ್ಟರಲ್ಲಿ 31 ನೋಟುಗಳನ್ನು ತಿಂದು ಮುಗಿಸಿತ್ತು. ಉಳಿದ ಎರಡು ನೋಟುಗಳೂ ಹರಿದಿವೆ' ಎಂದಿದ್ದಾನೆ.

ಕಷ್ಟಪಟ್ಟು ದುಡಿದ ಹಣವನ್ನು ಆ ಕುರಿ ತಿಂದರೂ ಆತ ಕೋಪ ಮಾಡಲಾಗದ ಸ್ಥಿತಿಯಲ್ಲಿದ್ದ. ಯಾಕೆಂದರೆ ಆ ಕುರಿ ಮರಿಯನ್ನು ಆತ ಮಗುವಿನಂತೆ ಸಾಕಿದ್ದ. ಘಟನೆಯ ಬಳಿಕ ಸರ್ವೇಶ್ ಮನೆಗೆ ಜನರ ಹಿಂಡೇ ಹರಿದು ಬರುತ್ತಿದ್ದು, ಬಂದವರೆಲ್ಲರೂ ಬಗೆ ಬಗೆಯ ಸಲಹೆಗಳನ್ನು ನೀಡುತ್ತಿದ್ದಾರೆ. ಕೆಲವರು ಕುರಿಗೆ ವಾಂತಿ ಬರುವಂತೆ ಮಾಡಿ ಎಂದರೆ ಇನ್ನು ಕೆಲವರು ಅದನ್ನು ಮಾರಿ ಎಂಬ ಸಲಹೆ ಮಾಡಿದ್ದಾರೆ.