ಗೋವಾ ರಾಜ್ಯಪಾಲರ ಕ್ರಮವನ್ನು ನಿರ್ದಿಷ್ಟ ಗೊತ್ತುವಳಿಯ ಮೂಲಕ ಮಾತ್ರ ಚರ್ಚಿಸಬಹುದು ಎಂದು ಉಪಸಭಾಪತಿ ಪಿ.ಜೆ.ಕುರಿಯನ್ ಹೇಳಿದ್ದಾರೆ.

ನವದೆಹಲಿ (ಮಾ.17): ರಾಜ್ಯಸಭೆಯಲ್ಲಿಂದು ಗೋವಾ ಸರ್ಕಾರ ರಚನೆ ವಿಚಾರ ಪ್ರತಿಧ್ವನಿಸಿದೆ.

ಕಲಾಪಗಳು ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಈ ಗೋವಾದಲ್ಲಿ ಬಿಜ ಸರ್ಕಾರ ರಚಿಸಿರುವ ಕ್ರಮವನ್ನು ಪ್ರಸ್ತಾಪಿಸಿದ್ದಾರೆ.

ಅದರ ಬೆನ್ನಲ್ಲೇ ಪ್ರತಿಪಕ್ಷದ ಸದಸ್ಯರು ‘ನಿಲ್ಲಿಸಿ, ನಿಲ್ಲಿಸಿ, ಪ್ರಜಾತತಂತ್ರದ ಕಗ್ಗೊಲೆಯನ್ನು ನಿಲ್ಲಿಸಿ’ ಎಂಬ ಘೋಷಣೆಗಳನ್ನು ಕೂಗಲಾರಂಭಿಸಿದ್ದಾರೆ.

ಗೋವಾ ರಾಜ್ಯಪಾಲರ ಕ್ರಮವನ್ನು ಗೊತ್ತುವಳಿಯ ಮೂಲಕ ಮಾತ್ರ ಚರ್ಚಿಸಬಹುದು ಎಂದು ಉಪಸಭಾಪತಿ ಪಿ.ಜೆ.ಕುರಿಯನ್ ಹೇಳಿದ್ದಾರೆ.

ಮಧ್ಯಪ್ರವೇಶಿಸಿದ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ, ಗೋವಾ ವಿಚಾರವನ್ನು ಚರಚಿಸಲು ಸರ್ಕಾರ ಸಿದ್ಧವಿದೆ, ಪ್ರತಿಪಕ್ಷಗಳು ಅದಕ್ಕೆ ಸಂಬಂಧಿಸಿದ ಗೊತ್ತುವಳಿಯನ್ನು ಮಂಡಿಸಲಿ ಎಂದು ದಿಗ್ವಿಜಯ್ ಸಿಂಗ್’ಗೆ ಪ್ರತ್ಯುತ್ತರ ನೀಡಿದರು.