ಕರ್ನಾಟಕಕ್ಕೆ ಮಹದಾಯಿ ನೀರು ಬಿಡಲು ಚರ್ಚೆಗೆ ಸಿದ್ಧವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಗೋವಾ ಮುಖ್ಯಮಂತ್ರಿ ಮನೋಹರ ಪರಿಕರ್ ಮಿತ್ರಪಕ್ಷಗಳಿಂದ ವ್ಯಕ್ತವಾಗುತ್ತಿರುವ ವಿರೋಧದಿಂದಾಗಿ ತೀವ್ರ ಮುಜುಗರಕ್ಕೊಳಗಾಗಿದ್ದಾರೆ.
ಹುಬ್ಬಳ್ಳಿ (ಡಿ.28): ಕರ್ನಾಟಕಕ್ಕೆ ಮಹದಾಯಿ ನೀರು ಬಿಡಲು ಚರ್ಚೆಗೆ ಸಿದ್ಧವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಗೋವಾ ಮುಖ್ಯಮಂತ್ರಿ ಮನೋಹರ ಪರಿಕರ್ ಮಿತ್ರಪಕ್ಷಗಳಿಂದ ವ್ಯಕ್ತವಾಗುತ್ತಿರುವ ವಿರೋಧದಿಂದಾಗಿ ತೀವ್ರ ಮುಜುಗರಕ್ಕೊಳಗಾಗಿದ್ದಾರೆ.
ಗೋವಾದಲ್ಲಿ ಬಿಜೆಪಿ ಜತೆ ಕೈ ಜೋಡಿಸಿರುವ ಗೋವಾ ಫಾರ್ವರ್ಡ್ ಪಾರ್ಟಿ ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ ಶಾಸಕರು ‘ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ನೀರು ಬಿಡುವ ಹೇಳಿಕೆ ಏಕೆ ನೀಡಿದಿರಿ, ತಕ್ಷಣ ಆ ಹೇಳಿಕೆಯನ್ನು ಅಧಿಕೃತವಾಗಿ ಹಿಂಪಡೆಯಿರಿ’ ಎನ್ನುವ ಒತ್ತಡ ಹೇರುತ್ತಿದ್ದಾರೆ.
ಹೀಗಾಗಿ ಸಿಎಂ ಪರಿಕರ್ ಅಕ್ಷರಶಃ ಗೊಂದಲಕ್ಕೆ ಸಿಲುಕಿದ್ದಾರೆ. ಗೋವಾ ದಲ್ಲಿ ಎದ್ದಿರುವ ತಮ್ಮ ವಿರುದ್ಧದ ಆಕ್ರೋಶದ ಅಲೆಯನ್ನು ಹೇಗೆ ಶಮನ ಮಾಡುವುದು ಎನ್ನುವ ಗೊಂದಲದಲ್ಲಿ ಬಿದ್ದಿರುವ ಪರ‌್ರಿಕರ್‌ಗೆ
ವಿಳಂಬ ಮಾಡಿದರೆ ಸರ್ಕಾರ ಬಿದ್ದುಹೋಗಬಹುದು ಎನ್ನುವ ಆತಂಕವೂ ಕಾಡುತ್ತಿದೆ. ಈ ವಿವಾದದ ಗುಜರಾತ್, ಹಿಮಾಚಲ ಪ್ರದೇಶ, ದೆಹಲಿ ಸುತ್ತುತ್ತಾ ಯಾರ ಕೈಗೂ ಸಿಗದೇ ಕಾಲಹರಣ ಮಾಡುತ್ತಿದ್ದಾರೆ. ಹಾಗಾಗಿ ಸ್ವಪಕ್ಷೀಯರೂ ಸೇರಿ ಯಾವುದೇ ಶಾಸಕರ ಕರೆ ಸ್ವೀಕರಿಸುತ್ತಿಲ್ಲವಂತೆ.
