ದೆಹಲಿಯ ಏಮ್ಸ್‌ನಿಂದ ದಿಢೀರನೇ ಗೋವಾಕ್ಕೆ ಮರಳಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಅವರ ಆರೋಗ್ಯ ಸುಧಾರಣೆಯಾಗಿದೆ. 

ಪಣಜಿ: ದೆಹಲಿಯ ಏಮ್ಸ್‌ನಿಂದ ದಿಢೀರನೇ ಗೋವಾಕ್ಕೆ ಮರಳಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಅವರ ಆರೋಗ್ಯ ಸುಧಾರಣೆಯಾಗಿದೆ. 

ಆದಾಗ್ಯೂ ಒಂದು ವಾರ ವಿಶ್ರಾಂ ತಿ ಪಡೆಯಲು ವೈದ್ಯರು ಸಲಹೆ ನೀಡಿದ್ದಾರೆ ಎಂದು ಸಿಎಂ ಕಚೇರಿ ತಿಳಿಸಿದೆ. ಇನ್ನು ಈ ಕುರಿತು ಸೋಮವಾರ ಸಿಎಂ ಆಪ್ತ ಕಾರ್ಯದರ್ಶಿ ರೂಪೇಶ್ ಕಾಮತ್ ಮಾತನಾಡಿ,‘ಪರ್ರಿಕರ್ ಬೆಳಗ್ಗೆ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಮಾತು ಕತೆನಡೆಸಿದ್ದಾರೆ,’ ಎಂದರು. 

ನಡುವೆ ರಾಜ್ಯ ದಲ್ಲಿನ ರಾಜಕೀಯ ಪರಿಸ್ಥಿತಿ ಪರಾಮರ್ಶೆಗಾಗಿ ರಾಜ್ಯ ಬಿಜೆಪಿಯ ಕೋರ್‌ಕಮಿಟಿ ಸೋಮವಾರ ಸಭೆ ಸೇರಿ ಚರ್ಚೆ ನಡೆಸಿತು.