ಪಣಜಿ[ಜ.01]  ಮೂರುವರೆ ತಿಂಗಳ ನಂತರ ಹೊಸ ವರ್ಷದ ಮೊದಲ ದಿನ ಸಚಿವಾಲಯದಲ್ಲಿದ ಕಾರ್ಯಾಲಯಕ್ಕೆ ಗೋವಾ ಸಿಎಂ ಆಗಮಿಸಿದ್ದಾರೆ. ಕಳೆದ ಗಣೇಶ ಚೌತಿಯ ಸಂದರ್ಭದಲ್ಲಿ ಆಗಮಿಸಿದ್ದೆ ಕೊನೆಯದಾಗಿತ್ತು.

ಗಣೇಶ ಚೌತಿಯ ಸಂದರ್ಭದಲ್ಲಿ ಮತ್ತೆ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಮನೋಹರ್ ಪರಿಕ್ಕರ್ ಗೋವಾದ ಕಾಂದೋಳಿಯಲ್ಲಿರುವ ಆಸ್ಪತ್ರೆಗೆ ದಾಖಲಾಗಿದ್ದರು. ಸುಮಾರು 9 ತಿಂಗಳಿನಿಂದ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದರೂ ಕೆಲಸ ಕಾರ್ಯಗಳನ್ನು ಮಾತ್ರ ವಿಚಾರಣೆ ನಡೆಸುತ್ತಲೆ ಇದ್ದರು.

ಹೊಸ ವರ್ಷ ಸಂಭ್ರಮಾಚರಣೆ - ಗೋವಾಕ್ಕೆ ತೆರಳಿದ ಬೆಂಗಳೂರಿನ ಪ್ರವಾಸಿ ಸಾವು!

ಎರಡು ಬಾರಿ ಅಮೇರಿಕಾ ನ್ಯೂಯಾರ್ಕಗೂ ತೆರಳಿ ಚಿಕಿತ್ಸೆ ಪಡೆದುಕೊಂಡು ಬಂದಿದ್ದಾರೆ.  ಕಳೆದ ಮೂರು ತಿಂಗಳಿಂದ ಮನೋಹರ್ ಪರಿಕ್ಕರ್ ರವರು ತಮ್ಮ ನಿವಾಸದಲ್ಲಿಯೇ ಮಂತ್ರಿಮಂಡಳದ ಬೈಠಕ್ ಕೂಡ ನಡೆಸಿದ್ದರು.  ಹೊಸ ವರ್ಷದ ಮೊದಲ ದಿನ ಮುಖ್ಯಮಂತ್ರಿಗಳು ಸಚಿವಾಲಯಕ್ಕೆ ಆಗಮಿಸಿದ್ದು ಸಚಿವರು, ಶಾಸಕರಲ್ಲಿ, ಕಾರ್ಯಕರ್ತರಲ್ಲಿ ಸಂಭ್ರಮ ಮನೆಮಾಡಿತ್ತು. ಚರ್ಚೆ ನಡೆಸಿ ಕೆಲ ಫೈಲ್ ಗಳಿಗೂ ಸಹಿ ಮಾಡಿದರು.