ದೇಶದಲ್ಲಿ ಇಂದು ಜನಕೊಂದವರನ್ನು ಜೈಲಿಗೆ ಹಾಕಲಾಗ್ತಿದೆ. ಜನ ಕೊಂದವರನ್ನು ಸನ್ಮಾನಿಸಲಾಗ್ತಿದೆ. ಭಾರತ ಸುಳ್ಳಿನ ಸಾಮ್ರಾಜ್ಯವಾಗಿದೆ. ಕೊಲೆಗಡುಕರ ಭಾರತವಾಗಿದೆ.

ಬೆಂಗಳೂರು(ಅ.15): ಸ್ವಾತಂತ್ರಕ್ಕಾಗಿ ಭಗತ್ ಸಿಂಗ್ ಹಾಗೂ ಮಹಾತ್ಮ ಗಾಂಧಿ ತಮ್ಮ ಮಕ್ಕಳನ್ನು ಅಡವಿಟ್ಟಿರಲಿಲ್ಲ ಆದರೆ ಟಿಟ್ಪು ಸುಲ್ತಾನ್ ಅಡವಿಟ್ಟಿದ್ದ ಎಂದು ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಪಿಎಫ್​​​ಐ ಆಯೋಜಿಸಿರುವ 'ನಮಗೂ ಹೇಳಲಿಕ್ಕಿದೆ’ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶಕ್ಕಾಗಿ ಟಿಪ್ಪು ತನ್ನ ಮಕ್ಕಳನ್ನು ಅಡವಿಟ್ಟ ಹೋರಾಡಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಭಗತ್ ಸಿಂಗ್, ಗಾಂಧಿ ತಮ್ಮ ಮಕ್ಕಳನ್ನು ಅಡವಿಡಲಿಲ್ಲ. ಧಿಮಂತ ಹೋರಾಟಗಾರರು ಕೂಡ ತಮ್ಮ ಮಕ್ಕಳನ್ನು ದೇಶಕ್ಕಾಗಿ ಅಡವಿಡಲಿಲ್ಲ. ಮದಕರಿ ನಾಯಕ, ಗಾಂಧಿಯವರ ಪುತ್ಥಳಿ ಬೇಕು ಆದರೆ ದೇಶಕ್ಕಾಗಿ ತನ್ನ ಮಕ್ಕಳನ್ನೇ ಅಡವಿಟ್ಟ ಟಿಪ್ಪು ಪುತ್ಥಳಿ ಏಕೆ ಬೇಡ' ಎಂದು ಪ್ರಶ್ನಿಸಿದರು.

ದನಕೊಂದವರು ಜೈಲಿಗೆ, ಜನಕೊಂದವರಿಗೆ ಸನ್ಮಾನ

ದೇಶದಲ್ಲಿ ಇಂದು ಜನಕೊಂದವರನ್ನು ಜೈಲಿಗೆ ಹಾಕಲಾಗ್ತಿದೆ. ಜನ ಕೊಂದವರನ್ನು ಸನ್ಮಾನಿಸಲಾಗ್ತಿದೆ. ಭಾರತ ಸುಳ್ಳಿನ ಸಾಮ್ರಾಜ್ಯವಾಗಿದೆ. ಕೊಲೆಗಡುಕರ ಭಾರತವಾಗಿದೆ. ಭಾರತ ಬದಲಾಗಬೇಕಾದರೆ ದಲಿತರು, ಹಿಂದುಳಿದವರು,ಮುಸಲ್ಮಾನರು ಬದಲಾಗಬೇಕಿದೆ. ಇದು ದನಗಳ ಭಾರತವಲ್ಲ, ಜನಗಳ ಭಾರತ. ಬಿಜೆಪಿಯವರು ಮೊದಲು ಕಾಂಗ್ರೆಸ್ ಮುಕ್ತ ಅಂದ್ರು. ಆಮೇಲೆ ಮುಸಲ್ಮಾನ ಮುಕ್ತ ಅಂತಾರೆ, ಆಮೇಲೆ ಬೌಧ್ಧ ಮುಕ್ತ,ಜೈನ ಮುಕ್ತ ಅಂತಾರೆ. ಭಾರತ, ಭಾರತವಾಗಿರಬೇಕು. 2018, 2019 ಮಹಾಯುದ್ಧ ಶುರುವಾಗಲಿದೆ. ಸ್ಪಷ್ಟ ಸಂದೇಶ ರವಾನೆ ಮಾಡಬೇಕಿದೆ. ಮುಸಲ್ಮಾನರು, ದಲಿತರು ಈ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ' ಎಂದು ಹೇಳಿದರು.