. ನಾಗರಿಕರು ಹಣಕ್ಕಾಗಿ ಬ್ಯಾಂಕ್, ಎಟಿಎಂಗಳ ಮುಂದೆ ಸರದಿ ಸಾಲಲ್ಲಿ ನಿಲ್ಲುತ್ತಿದ್ದಾರೆ. . ಹಳೆಯ ನೋಟುಗಳು ಕೂಡ ನೀಡಬಹುದು

ದೇಶಾದ್ಯಂತ 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದ ಹಿನ್ನಲೆಯಲ್ಲಿ ಸದ್ಯ ಎಲ್ಲೆಡೆ ತಾತ್ಕಾಲಿಕ ಹಣದ ಕೊರತೆ ಎದುರಾಗಿದೆ. ನಾಗರಿಕರು ಹಣಕ್ಕಾಗಿ ಬ್ಯಾಂಕ್, ಎಟಿಎಂಗಳ ಮುಂದೆ ಸರದಿ ಸಾಲಲ್ಲಿ ನಿಲ್ಲುತ್ತಿದ್ದಾರೆ. ಆದರೆ ಶರಣ್ ಅಭಿನಯದ ನಿರ್ದೇಶಕ ಪವನ್ ಒಡೆಯರ್ ನಿರ್ದೇಶನದ ನಟರಾಜ ಸರ್ವೀಸ್ ಚಿತ್ರ ನೋಡಲು ಹಳೆಯ 500 ಮುಖ ಬೆಲೆಯ ನೋಟುಗಳನ್ನ ನೀಡಬಹುದು.. ಚಿತ್ರದ ನಿರ್ದೇಶಕ ಪವನ್ ಒಡೆಯರ್ ಈ ಕುರಿತು ಮಾಹಿತಿ ನೀಡಿದ್ದು, ರಾಜ್ಯಾದ್ಯಂತ ಯಾವುದೇ ಚಿತ್ರಮಂದಿರಗಳಲ್ಲಿಯೂ ನಟರಾಜ ಸರ್ವಿಸ್ ಚಿತ್ರ ವೀಕ್ಷಕರು ಹೊಸ ನೋಟನ್ನೇ ನೀಡ ಬೇಕು ಎಂದೇನಿಲ್ಲ . ಹಳೆಯ ನೋಟುಗಳು ಕೂಡ ನೀಡಬಹುದು ಅಂತಾ ಹೇಳಿದೆ..ಆದ್ರೆ ಸ್ನೇಹಿತರು ಹಾಗು ಫ್ಯಾಮಿಲಿ ಒಟ್ಟಾಗಿ ಬಂದು 500 ರೂಪಾಯಿ ಹಾಗು 1000 ರೂಪಾಯಿಗೆ ಟಿಕೆಟ್ ಖರೀದಿಸಿ ಸಿನಿಮಾ ನೋಡಬಹುದು ಅಂತಾ ಚಿತ್ರತಂಡ ಹೇಳಿದೆ.