ನವದೆಹಲಿ: ನನಗೆ  50 ಕೋಟಿ ರು. ಕೊಟ್ರೆ ಪ್ರಧಾನ ಸೇವಕ ಎಂದುಕೊಂಡಿರುವ ಮೋದಿ ಯನ್ನು ಹತ್ಯೆಗೈಯುವೆ ಎಂದು ವಾರಾಣಸಿಯ ಎಸ್ಪಿ ಅಭ್ಯರ್ಥಿ ಹಾಗೂ ಮಾಜಿ ಯೋಧ ತೇಜ್ ಬಹಾದ್ದೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಕುರಿತ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಬಿಜೆಪಿ ಆತಂಕ ವ್ಯಕ್ತಪಡಿಸಿದೆ.

"

ಆದರೆ ವಿಡಿಯೋದಲ್ಲಿ ಸ್ಪಷ್ಟತೆ ಇಲ್ಲ ಮತ್ತು ಇದರಲ್ಲಿನ ವ್ಯಕ್ತಿ ತೇಜ್ ಬಹಾದ್ದೂರ ಹೌದೋ, ಅಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಇದೇ ವೇಳೆ ತೇಜ್ ಬಹಾದ್ದೂರ್ ವಾರಣಸಿಯಲ್ಲಿ ತಮ್ಮ ನಾಮಪತ್ರ ತಿರಸ್ಕರಿಸಿದ ಚುನಾವಣಾ ಆಯೋಗದ ಕ್ರಮ ಪ್ರಶ್ನಿಸಿ ಸುಪ್ರಿಂಕೋರ್ಟ್‌ಗೆ ದೂರು ಸಲ್ಲಿಸಿದ್ದಾರೆ. 

ವಾರಾಣಸಿ: ಮೋದಿ ವಿರುದ್ಧ ತೊಡೆ ತಟ್ಟಿದ್ದ ಮಾಜಿ BSF ಯೋಧನ ನಾಮಪತ್ರ ತಿರಸ್ಕೃತ!